ಮಸ್ಚಿದುಲ್ ಅಕ್ಸಾ ಯಹೂದಿಗಳದ್ದಲ್ಲ, ಮುಸ್ಲಿಮರದ್ದೇ: ಯುನೆಸ್ಕೊ ವರದಿ
ಜೆರುಸಲೇಂ, ಎಪ್ರಿಲ್ 20: ಮಸ್ಚಿದುಲ್ ಅಕ್ಸಾ ಹೈಬ್ರೋನ್, ಬೆತ್ಲೆಹೇಂ ಪಟ್ಟಣಗಳ ಇತರಮುಸ್ಲಿಮ್ ಆರಾಧಾನಾಲಯಗಳು ಮತ್ತು ಮುಸ್ಲಿಂ ಕೇಂದ್ರಗಳು ಆಗಿವೆ ಯಹೋದಿ ಪರಂಪರೆಗೆ ಜೋಡಿಸಿ ಇದನ್ನು ವಶಪಡಿಸುವ ಕ್ರಮವನ್ನು ಕೈಬಿಡಬೇಕೆಂದು ಯುನೆಸ್ಕೊ ಹೇಳಿದೆ. ಫೆಲೆಸ್ತೀನ್‌ನಲ್ಲಿ ಪ್ರವಾಸಿಗರು ಹೆಚ್ಚು ಬರುವಮತ್ತು ಇಸ್ರೇಲ್ ಹಕ್ಕುವಾದಕ್ಕಿಳಿದಿರುವ ಮಸ್ಚಿದ್ ಇಬ್ರಾಹೀಂ,ಬಿಲಾಲ್ ಬಿನ್ ರಬಾಹ್ ಮಸ್ಚಿದ್ ಫೆಲೆಸ್ತೀನಿಯರಿಗೆ ಮಾತ್ರ ಸೇರಿರುವವು ಎಂದು ಕಳೆದ ದಿವಸ ಹೊರಬಿಟ್ಟ ವರದಿಯಲ್ಲಿ ಹೇಳಲಾಗಿದೆ.
ಹಕ್ಕುವಾದವನ್ನು ಮುಂದಿಟ್ಟು ಮಸ್ಚಿದುಲ್ ಅಕ್ಸಾವನ್ನು ವಶಪಡಿಸಿಕೊಳ್ಳು ಯಹೂದಿಗಳ ತೀವ್ರವಾದಿ ವಿಭಾಗಗಳು ಇತ್ತೀಚೆಗೆ ನಡೆಸುತ್ತಿರುವ ಪ್ರಯತ್ನಗಳು ಭಾರಿ ಜನಹಾನಿಗೆ ಘರ್ಷಣೆಗೆ ಕಾರಣವಾಗಿತ್ತು. ಮುಸ್ಲಿಮರು ಅಪಾರ ಪಾವಿತ್ರ್ಯ ಕಲ್ಪಿಸುವ ಮಸ್ಚಿದುಲ್ ಅಕ್ಸಾದ ಮೇಲೆ ಇಸ್ರೇಲಿ ಹಸ್ತಕ್ಷೇಪವನ್ನು ಅಂಗೀಕರಿಸಲಾಗದು ಎಂದು ವರದಿಆಕ್ಷೇಪಿಸಿದೆ.
ಈ ನಡುವೆ ಜೆರುಸಲೇಂ ನಗರದಲ್ಲಿ ಬಸ್‌ನಲ್ಲಿ ಸ್ಫೋಟಕ ವಸ್ತು ಸಿಡಿದು 21 ಮಂದಿ ಗಾಯಗೊಂಡಿದ್ದಾರೆ.ಬೆಂಕಿ ಹರಡಿ ಸಮೀಪದಲ್ಲಿದ್ದ ಬಸ್ ಮತ್ತು ಕಾರ್‌ಗಳಿಗೆ ಹಾನಿಯಾಗಿದೆ.ಈ ಘಟನೆಯ ಹೊಣೆಯನ್ನು ಯಾರೂ ವಹಿಸಿಕೊಂಡಿಲ್ಲ.