ಕೇರಳ: ವಾಹನ ಅಪಘಾತಕ್ಕೆ ಪರಿಹಾರ ಎಷ್ಟು ಗೊತ್ತೇ? ಒಂದುಕೋಟಿ ರೂಪಾಯಿ
ಕೋಝಿಕ್ಕೋಡ್, ಎಪ್ರಿಲ್ 20: ಅದ್ಭುತ ತೀರ್ಪೊಂದು ಕೇರಳದಿಂದ ವರದಿಯಾಗಿದೆ. ಲಾರಿಬೈಕ್ ಢಿಕ್ಕಿಯಲ್ಲಿ ಗಾಯಗೊಂಡು ಮೂರು ವರ್ಷಗಳಿಂದ ಅಪ್ರಜ್ಞಾ (ಕೋಮಾ) ಸ್ಥಿತಿಯಲ್ಲಿರುವ ಯುವಕನಿಗೆ 1,00.94,000 ನಷ್ಟ ಪರಿಹಾರ ನೀಡಬೇಕೆಂದು ತೀರ್ಪು ನೀಡಲಾದ ಕುರಿತು ವರದಿಯಾಗಿದೆ. ಕೊಡಿಂಚೇರಿ ಪುಲಿಕ್ಕಯಂ ಕರಿಂದೋಳಿಲ್ ಲಿಯೋ ಥಾಮಸ್‌ಗೆ(28) ವಾಹನ ಅಪಘಾತ ನಷ್ಟಪರಿಹಾರ ಟ್ರಿಬ್ಯೂನಲ್ ಜಡ್ಜ್ ಎಂಜಿ ಪದ್ಮಿನಿ ಈ ನಷ್ಟಪರಿಹಾರ ತೀರ್ಪುನೀಡಿದ್ದಾರೆ. ಅಪಘಾತವುಂಟುಮಾಡಿದ ಲಾರಿಯ ಇನ್ಶೂರೆನ್ಸ್ ಕಂಪೆನಿಯಾದ ರಿಲಯನ್ಸ್ ಇನ್ಶೂರೆನ್ಸ್ ಇಷ್ಟು ನಷ್ಟ ಮತ್ತು ಅರ್ಜಿ ಸಲ್ಲಿಸಿದ ದಿವಸದಿಂದ ಬಡ್ಡಿಯೂ ಕೋರ್ಟು ಖರ್ಚನ್ನೂ ನೀಡಬೇಕೆಂದು ನ್ಯಾಯಾಧೀಶೆ ಸೂಚಿಸಿದ್ದಾರೆ. ಅರ್ಜಿ ಸಲ್ಲಿಸಿ ಮೂವತ್ತು ಲಕ್ಷ ರೂಪಾಯಿ ನೀಡಬೇಕೆಂದು ವಿನಂತಿಸಲಾಗಿತ್ತು. ಆದರೆಲಿಯೊ ಥಾಮಸ್‌ರ ಅವಸ್ಥೆಯನ್ನು ಅರ್ಥಮಾಡಿಕೊಂಡು ಕೋರ್ಟ್ ನಷ್ಟಪರಿಹಾರ ಮೊತ್ತವನ್ನು ಹೆಚ್ಚಿಸಿದೆ. ಕೋಝಿಕ್ಕೋಡ್ ಪಾಪ್ಯುಲರ್ ಸರ್ವಿಸ್‌ಸೆಂಟರ್ ಉದ್ಯೋಗಿಯಾಗಿದ್ದ ಲಿಯೊ ಮನೆಯಿಂದ ಕಚೇರಿಗೆ ಬರುತ್ತಿದ್ದಾಗ 2013 ಮಾರ್ಚ್ 31ಕ್ಕೆ ಬೆಳಗ್ಗೆ ಕೂಡಾತ್ತದಲ್ಲಿ ಲಾರಿ ಢಿಕ್ಕಿಯಾಗಿತ್ತು. ತಲೆಗೆ ಗಂಭೀರ ಗಾಯವಾದ್ದರಿಂದ ಯುವಕ ಕೋಮ ಸ್ಥಿತಿಗೆ ತೆರಳಿದ್ದರು. ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತಾದರೂ ಪ್ರಯೋಜನವಾಗಿರಲಿಲ್ಲ. ಲಿಯೋರ ಫೋಟೊ ಮೆಡಿಕಲ್ ವರದಿ ಪರಿಗಣಿಸಿ ಕೋರ್ಟ್ ತೀರ್ಪು ನೀಡಿದೆ. ಅಡ್ವೊಕೇಟ್ ಜಿ. ಮನೋಹರ್‌ಲಾಲ್, ಅಡ್ವೊಕೇಟ್ ಸುಧಾ ಹರಿದಾಸ್ ದೂರುದಾರರ ಪರ ವಾದಿಸಿದ್ದರು ಎಂದು ವರದಿಯಾಗಿದೆ.