×
Ad

ಹಡಗಿನಲ್ಲಿ ಆಮ್ಲಜನಕ ಸಿಲಿಂಡರ್ ಸ್ಫೋಟ

Update: 2016-04-20 22:54 IST

ಮುಂಬೈ, ಎ.20: ಸಮುದ್ರದಾಳಕ್ಕೆ ಮುಳುಗಲು ಬೆಂಬಲ ನೀಡುವ ಐಎನ್‌ಎಸ್ ನಿರೀಕ್ಷಕ್ ನೌಕೆಯ ಮುಳುಗುಗಾರಿಕೆ ಉಪಕರಣವೊಂದರ ಪರೀಕ್ಷೆಯ ವೇಳೆ ಗಾಯಗೊಂಡಿದ್ದ ಭಾರತೀಯ ನೌಕಾಪಡೆಯ ಮುಳುಗುಗಾರನೊಬ್ಬನ ಕಾಲನ್ನು ಕತ್ತರಿಸಲಾಗಿದೆ.

ಎ.16ರಂದು ಈ ಘಟನೆ ನಡೆದಿದೆ. ಹೆಲ್ಮೆಟೊಂದಕ್ಕೆ ಸಿಕ್ಕಿಸ ಬಲ್ಲ ಆಮ್ಲಜನಕದ ಕ್ಯಾನನ್ನು ಜೋಡಿಸುತ್ತಿದ್ದ ವೇಳೆ ಅದು ಸ್ಫೋಟಗೊಂಡು ಈ ಅಪಘಾತ ಸಂಭವಿಸಿತೆಂದು ಕ್ಯಾಪ್ಟನ್ ಡಿ.ಕೆ.ಶರ್ಮಾ ತಿಳಿಸಿದ್ದಾರೆ.
ಇತರ ಇಬ್ಬರು ನಾವಿಕರಿಗೆ ಹೊಟ್ಟೆ ಹಾಗೂ ಕಾಲುಗಳಲ್ಲಿ ಲಘು ಗಾಯಗಳಾಗಿವೆ. ಮೂವರನ್ನು ಮುಂಬೈಯ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ. ಮುಳುಗುಗಾರನ ಬಲಗಾಲನ್ನು ಮೊಣಕಾಲ ಬಳಿಯಿಂದ ಕತ್ತರಿಸಲಾಗಿದೆ. ಆತನಿಗೆ ಕೃತಕ ಕಾಲನ್ನು ಅಳವಡಿಸಲಾಗುವುದೆಂದು ಅವರು ಹೇಳಿದ್ದಾರೆ.
ನೌಕಾ ಸೇನೆಯಲ್ಲಿ ಸಿಲಿಂಡರೊಂದು ಈ ರೀತಿ ಸ್ಫೋಟವಾದುದು ಇದೇ ಮೊದಲ ಸಲವಾಗಿದೆ. ಘಟನೆಯ ಕುರಿತು ತನಿಖೆ ನಡೆಯುತ್ತಿದೆ. ಸ್ಫೋಟ ನಡೆದ ವೇಳೆ ಹಡಗು ತಿರುವನಂತಪುರದ ಸಮೀಪದ ವಿಝಿಂಜಾವತ್ ಬಂದರಿನಿಂದ 40 ನಾವಿಕ ಮೈಲು ದೂರದಲ್ಲಿತ್ತೆಂದು ಮೂಲಗಳು ತಿಳಿಸಿವೆ.

ಐಎನ್‌ಎಸ್ ನಿರೀಕ್ಷಕ್ ತೈಲ ಅನ್ವೇಷಣೆಗೆ ಬಳಸುವ ಹಡಗಾಗಿದ್ದು, ಜಲಾಂತರ್ಗಾಮಿ ರಕ್ಷಣಾ ಹಡಗಾಗಿಯೂ ಕಾರ್ಯಾಚರಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News