×
Ad

ವಿಶ್ವಸಂಸ್ಥೆಯ ಮಾನವ ಹಕ್ಕು ಸ್ಪರ್ಧೆ ವಿಜೇತೆ ದೃಷ್ಟಿಹೀನ ಫೆಲೆಸ್ತಿನಿಯನ್ ಬಾಲಕಿ ಯಾಸ್ಮೀನ್

Update: 2016-04-21 15:40 IST

ಗಾಝಾ ಪಟ್ಟಿಯ ಪ್ರದೇಶದನಿವಾಸಿಯಾಗಿರುವ ದೃಷ್ಟಿಹೀನೆ ಬಾಲಕಿಯೊಬ್ಬಳು ವಿಶ್ವಸಂಸ್ಥೆಯ ಮಾನವ ಹಕ್ಕು ಸ್ಪರ್ಧೆಯಲ್ಲಿ ವಿಜೇತಳಾಗಿದ್ದಾಳೆ. ಅವಳಿರುವ ಪ್ರದೇಶದ ಯುಎನ್‌ಆರ್‌ಡಬ್ಲ್ಯೂಎ ಶಾಲೆಗಳಲ್ಲಿ ಈ ಸ್ಪರ್ಧೆ ಆಯೋಜಿಸಲಾಗಿತ್ತು.

ಯಾಸ್ಮೀನ್ ಅಲ್-ನಜ್ಜರ ಎಂಬ 13 ವರ್ಷದ ಈ ಬಾಲಕಿಅಂಧ ಮಕ್ಕಳ ಶಾಲೆಯಲ್ಲಿ ಕಲಿಯುತ್ತಿದ್ದು ಸ್ಪರ್ಧೆಯ ಅಂಗವಾಗಿ 40 ಪ್ರಶ್ನೆಗಳನ್ನು ಕೇಳಲಾಗಿತ್ತು. ಈ ಸ್ಪರ್ಧೆಯಲ್ಲಿ ಒಟ್ಟು 65 ಮಕ್ಕಳು ಭಾಗವಹಿಸಿದ್ದರು. ‘‘ನಾನು ಪ್ರಥಮ ಸ್ಥಾನ ಪಡೆದೆನೆಂದು ತಿಳಿದಾಗ ನನ್ನ ಕುಟುಂಬ ಹಾಗೂ ಸ್ನೇಹಿತರು ಹೆಮ್ಮೆ ಪಟ್ಟರು,’’ ಎಂದು ಗಾಝಾದ ಸ್ಟೂಡೆಂಟ್ ಪಾರ್ಲಿಮೆಂಟ್ ಫಾರ್ ಹ್ಯೂಮನ್ ರೈಟ್ಸ್ ಸಂಸ್ಥೆಯ ಸದಸ್ಯೆಯಾಗಿರುವ ಬಾಲಕಿ ಹೇಳುತ್ತಾಳೆ. ತನ್ನ ಶಿಕ್ಷಕಿ ಖದೀಜಾ ಅಲ್-ಮಶರವಿಯವರ ಸಹಕಾರದೊಂದಿಗೆ ಒಂದು ವಾರವಿಡೀ ಈ ಸ್ಪರ್ಧೆಗೆ ತಾನು ತಯಾರಿ ನಡಸಿದ್ದಾಗಿ ಯಾಸ್ಮೀನ್ ವಿವರಿಸುತ್ತಾರೆ.

ಇನ್ನಿಬ್ಬರು ಅಂಧ ವಿದ್ಯಾರ್ಥಿಗಳಾದ ಯಾಸ್ಸರ್ ಅಲ್-ಅರ್ಜ(13) ಹಾಗೂ ಅಬಿ-ಶಾವಿಶ್ (12) ಕೂಡ ಈ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ.

ಯುಎನ್‌ಆರ್‌ಡಬ್ಲ್ಯೂಎಗಾಝಾದಲ್ಲಿರುವ ತನ್ನ ಶಾಲೆಗಳಲ್ಲಿ ಮಾನವ ಹಕ್ಕುಗಳ ಬಗ್ಗೆ ಶಿಕ್ಷಣ ನೀಡುವುದು ಹಲವು ಫೆಲೆಸ್ತೀನಿ ಕುಟುಂಬಗಳಿಗೆ ಇಷ್ಟವಿಲ್ಲ. ಆಕ್ರಮಿತ ಫೆಲೆಸ್ತೀನಿನಲ್ಲಿ ಇಸ್ರೇಲಿಗಿರುವ ಹಕ್ಕನ್ನು ಅದು ಸಮರ್ಥಿಸುವುದೇ ಅವರ ವಿರೋಧಕ್ಕೆ ಕಾರಣವಾಗಿದೆ.

1948ರಲ್ಲಿ ಝಯೋನಿಸ್ಟ್ ಉಗ್ರ ಗುಂಪುಗಳಿಂದ ತಮ್ಮ ಮನೆ ಬಿಡುವಂತಾಗಿದ್ದ ಫೆಲೆಸ್ತಿನೀಯರ ಮೊಮ್ಮಕ್ಕಳೇ ಈಗ ಈ ಶಾಲೆಗಳ ವಿದ್ಯಾರ್ಥಿಗಳಾಗಿದ್ದಾರೆ. ಈ ಶಾಲೆಗಳು ಮುಂದಿನ ವರ್ಷದಿಂದ ಮಾನವ ಹಕ್ಕುಗಳಿಗೆ ಸಂಬಂಧ ಪಟ್ಟ ಪಾಠಗಳನ್ನು ನಡೆಸುವುದಿಲ್ಲ, ಎಂದು ಶಿಕ್ಷಕರೊಬ್ಬರು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News