×
Ad

ಅಮೆರಿಕ: ಭಾರತ ಅಪಹರಣಕಾರರ ಪ್ರಧಾನ ಅಡ್ಡೆ ಎಂದ ಪ್ರತಿಭಟನಕಾರರು!

Update: 2016-04-21 16:29 IST

ವಾಷಿಂಗ್ಟನ್, ಎಪ್ರಿಲ್ 21: ನ್ಯಾಯಯಾಚಿಸಿ ಅಪಹರಣಕ್ಕೊಳಗಾದ ಮಕ್ಕಳ ಹೆತ್ತವರು ವೈಟ್ ಹೌಸ್‌ನ ಸಮೀಪ ಪ್ರತಿಭಟನೆ ನಡೆಸಿದರೆಂದು ವರದಿಗಳು ತಿಳಿಸಿವೆ. ಅಪಹರಿಸಲಾದ ಮಕ್ಕಳನ್ನು ಭಾರತ ಸಹಿತ ಬೇರೆ ಬೇರೆ ರಾಷ್ಟ್ರಗಳಿಗೆ ರವಾನಿಸಲಾಗಿದೆ ಎಂದು ಹೇಳಲಾಗುತ್ತಿದೆ. ಬ್ರಿಂಗ್ ಅವರ್ ಕಿಡ್ಸ್ ಹೋಂ, ಕೊಯಿಲೀಶನ್ ಟು ಸ್ಟಾಫ್ ಇಂಟನೇಶನಲ್ ಪೇರೆಂಟ್ ಚೈಲ್ಡ್ ಅಬ್ಡಕ್ಷನ್ ಎಂಬ ಸಂಘಟನೆಗಳ ನೇತೃತ್ವದಲ್ಲಿ ಕ್ಯಾಂಡಲ್ ಉರಿಸಿ ಬುಧವಾರ ಪ್ರತಿಭಟನೆ ನಡೆಸಲಾಗಿದೆ ಎಂದು ವರದಿಗಳು ತಿಳಿಸಿವೆ.

 ಅಂತಾರಾಷ್ಟ್ರ ಮಟ್ಟದಲ್ಲಿ ಮಕ್ಕಳ ಅಪಹರಣ ನಡೆಸುವುದರ ವಿರುದ್ಧ ಬಲಿಷ್ಠ ಕಾನೂನು ಆವಿಷ್ಕರಿಸಬೇಕೆಂದು ಅಮೆರಿಕ, ಭಾರತ ಸಹಿತ ವಿದೇಶಗಳನ್ನು ವಿನಂತಿಸಿದ್ದಾರೆ. ಪ್ರತಿವರ್ಷ ಸಾವಿರ ಮಕ್ಕಳನ್ನು ಅಪಹರಿಸಲಾಗುತ್ತಿದೆ ಎಂದು ಲೆಕ್ಕಗಳು ತಿಳಿಸುತ್ತಿವೆ. ಮಕ್ಕಳನ್ನು ಅಪಹರಿಸುವುದಕ್ಕೆ ಸಂಬಂಧಿಸಿ ಹೇಗೆ ಒಪ್ಪಂದದಲ್ಲಿ ಸಹಿ ಹಾಕದ ಭಾರತ ಅಪಹರಿಸಲ್ಪಡುವವರ ಪ್ರಧಾನ ಅಡ್ಡೆಯಾಗಿದೆ ಎಂದು ಅವರು ಹೇಳಿದ್ದಾರೆ. ಮಕ್ಕಳ ಅಪಹರಣವನ್ನು ಅಪರಾಧವೆಂದು ಪರಿಗಣಿಸಲು ಇನ್ನೂ ಕೂಡಾ ಭಾರತ ಸಿದ್ಧವಾಗಿಲ್ಲ ಎಂದು ಪ್ರತಿಭಟನಾಕಾರರಲ್ಲಿ ಒಬ್ಬರಾದ ರವಿ ಪರ್ಮಾರ್ ಹೇಳಿದ್ದಾರೆ. ಅಪಹರಣ ನಡೆಸಲಾದ ಪ್ರಕರಣಗಳಲ್ಲಿ ಕ್ರಮವನ್ನು ಫಲಪ್ರದಗೊಳಿಸಲಿಕ್ಕಾಗಿ ಕಾನೂನುಸುಧಾರಣೆ ನಡೆಸಬೇಕೆಂದು ಅಮೆರಿಕನ್ ಕಾಂಗ್ರೆಸ್ ಸದಸ್ಯರನ್ನು ಪ್ರತಿಭಟನಾಕಾರರು ಭೇಟಿಯಾಗಿರುವುದಾಗಿ ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News