×
Ad

ಒಮನ್: ಸಲಾಲದಲ್ಲಿ ಕೇರಳದ ನರ್ಸ್ ದರೋಡೆಕೋರರಿಂದ ಹತ್ಯೆ!

Update: 2016-04-21 16:31 IST

ಸಲಾಲ, ಎ.21 : ಒಮನ್‌ನ ಸಲಾಲದಲ್ಲಿ ಕೇರಳದ ನರ್ಸ್ ಒಬ್ಬರು ದರೋಡೆಕೋರರ ತಿವಿತಕ್ಕೊಳಗಾಗಿ ಮೃತರಾದರೆಂದು ವರದಿಯಾಗಿದೆ. ಎರ್ನಾಕುಲಂ ಅಂಗಮಾಲಿ ಕರುಕುಟ್ಟಿ ಎಂಬಲ್ಲಿನ ಅಝೀಝಿ ನಗರದ ರಾಬರ್ಟ್ ಎಂಬವರ ಪುತ್ರಿ ಚಿಕ್ಕು ರಾಬರ್ಟ್(27) ದರೋಡೆಕೋರರ ದಾಳಿಗೆ ತುತ್ತಾಗಿ ಮೃತಳಾದ ಮಹಿಳೆಯೆಂದು ಗುರುತಿಸಲಾಗಿದೆ. ಬುಧವಾರ ರಾತ್ರೆ ಹತ್ತು ಗಂಟೆಗೆ ಸಲಾಲ ನಗರದಲ್ಲಿ ವಾಸಸ್ಥಳದಲ್ಲಿ ಮೃತರಾದ ಸ್ಥಿತಿಯಲ್ಲಿ ಇವರು ಪತ್ತೆಯಾಗಿದ್ದರು. ಇವರು ಮೂರು ತಿಂಗಳ ಗರ್ಭಿಣಿ ಕೂಡಾ ಆಗಿದ್ದರು. ಬದರ್ ಅಲ್‌ಸವ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್‌ಆಗಿ ಇವರು ಹತ್ತು ಗಂಟೆಗೆ ಕೆಲಸಕ್ಕೆ ಆಗಮಿಸದ್ದರಿಂದ ಇದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಪತಿ ಲಿನ್ಸನ್ ಹುಡುಕುತ್ತಾ ವಾಸಸ್ಥಳಕ್ಕೆ ಬಂದಾಗ ರಕ್ತದಲ್ಲಿ ಮುಳುಗಿ ಹೋಗಿದ್ದ ಚಿಕ್ಕು ಕಂಡು ಬಂದಿದ್ದರು. ಕಿವಿಯನ್ನು ಕತ್ತರಿಸಿ ಆಭರಣಗಳನ್ನು ದೋಚಲಾಗಿತ್ತು. ಶರೀರದ ವಿವಿಧ ಭಾಗಗಳಲ್ಲಿ ಮಾರಕವಾಗಿ ತಿವಿಯಲಾಗಿತ್ತು. ದರೋಡೆ ಸಂದರ್ಭದಲ್ಲಿ ದರೋಡೆಕೋರರ ತಿವಿತದಿಂದ ಮಹಿಳೆ ಮೃತರಾಗಿದ್ದಾರೆ ಎಂದು ಅಂದಾಜಿಸಲಾಗಿದೆ.

ನಾಲ್ಕು ವರ್ಷಗಳಿಂದ ಸಲಾಲದಲ್ಲಿ ಈ ಮಹಿಳೆ ನರ್ಸ್ ಆಗಿ ಕೆಲಸಮಾಡುತ್ತಿದ್ದಾರೆ. ಪತಿ ಲಿನ್ಸ್ ಚೆಂಙನಶ್ಶೇರಿ ನಿವಾಸಿಯಾಗಿದ್ದಾರೆ. ಮೃತದೇಹವನ್ನು ಸುಲ್ತಾನ್ ಖಾಬೂಸ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News