ಪೆಟ್ರೋಲ್, ಡೀಸೆಲ್ ವಾಹನಗಳ ನಿಷೇಧದತ್ತ ನೆದರ್‌ಲೆಂಡ್!
Update: 2016-04-21 16:39 IST
ನೆದರ್ಲೆಂಡ್, ಎಪ್ರಿಲ್ 21: ನೆದರ್ಲೆಂಡ್ ರಸ್ತೆಗಳಿಂದ 2025ಕ್ಕಾಗುವಾಗ ಪೆಟ್ರೋಲ್, ಡೀಸೆಲ್ ಇಂಧನಗಳನ್ನು ಉಪಯೋಗಿಸಿ ಚಲಿಸುವ ವಾಹನಗಳನ್ನು ಸಂಪೂರ್ಣವಾಗಿ ದೂರವಿರಿಸಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ. ನೆದರ್ಲೆಂಡ್ ಪೆಟ್ರೋಲ್, ಡೀಸೆಲ್ ಕಾರುಗಳನ್ನು ಹಿಂದೆಗೆಯಲು ಲೇಬರ್ ಪಾರ್ಟಿ ತಂದಿರುವ ಆದ್ಯಾದೇಶ ಲೋವರ್ ಪಾರ್ಲಿಮೆಂಟ್ ಹೌಸ್‌ನಲ್ಲಿ ಹೆಚ್ಚಿನ ಮಂದಿ ಬೆಂಬಲಿಸಿದ್ದಾರೆಂದು ಹೇಳಲಾಗಿದೆ.
ಈ ಆದ್ಯಾದೇಶ ಪಾಸಾದರೆ 2025ಕ್ಕಿಂತ ಮೊದಲು ನೆದರ್ಲೆಂಡ್‌ನಲ್ಲಿ ಹೊಸ ಪೆಟ್ರೋಲ್, ಡೀಸೆಲ್ ವಾಹನಗಳನ್ನು ಖರೀದಿಸಲು ಸಾಧ್ಯವಿಲ್ಲ. ಈಗ ನೆದರ್ಲೆಂಡ್‌ನ ವಾಹನಗಳಲ್ಲಿ ಶೆ. 10ರಷ್ಟು ಇಲೆಕ್ಟ್ರಿಕ್ ವಾಹನಗಳಿವೆ ಮಲೀನೀಕರಣ ತಡೆಯುವ ನಿಟ್ಟಿನಲ್ಲಿ ಡೀಸೆಲ್ ಪೆಟ್ರೋಲ್ ಇಂಧನ ಬಳಸುವ ವಾಹನಗಳನ್ನು ನಿಷೇಧಿಸಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.
ಏನಿದ್ದರೂ ಡೀಸೆಲ್‌ನ ಪೆಟ್ರೋಲ್‌ನ ಕೊನೆ ನೆದರ್ಲೆಂಡಿನಿಂದ ಆರಂಭವಾಗಲಿದೆಯೇ ಎಂದು ಜಗತ್ತು ಕಾದು ನೋಡುತ್ತಿದೆ ಎಂದು ವರದಿಗಳು ತಿಳಿಸಿವೆ.