ಮೆಕ್ಸಿಕೊ-ಅಮೆರಿಕ ಗಡಿಯಲ್ಲಿ ಅರ್ಧ ಮೈಲಿ ಸುರಂಗ ಪತ್ತೆ
Update: 2016-04-21 20:24 IST
ಸ್ಯಾನ್ ಡಿಯಾಗೊ (ಅಮೆರಿಕ), ಎ. 21: ಮೆಕ್ಸಿಕೊ ಮತ್ತು ಅಮೆರಿಕ ಗಡಿಯಲ್ಲಿ ಅರ್ಧ ಮೈಲಿಗೂ ಅಧಿಕ ಉದ್ದದ ಸುರಂಗವೊಂದನ್ನು ಪತ್ತೆಹಚ್ಚಿರುವುದಾಗಿ ಅಮೆರಿಕದ ಅಧಿಕಾರಿಗಳು ಬುಧವಾರ ಹೇಳಿದ್ದಾರೆ. ಸುರಂಗವು ಮೆಕ್ಸಿಕೊದ ಟಿಜುವಾನ ಹೌಸ್‌ನಿಂದ ಸ್ಯಾನ್ ಡಿಯಾಗೊದ ವಾಹನ ನಿಲುಗಡೆ ಸ್ಥಳವೊಂದರವರೆಗೆ ಚಾಚಿತ್ತು. ದಾಳಿಯಲ್ಲಿ ಒಂದು ಟನ್‌ಗೂ ಅಧಿಕ ಕೊಕೇನ್ ಮತ್ತು ಏಳು ಟನ್‌ಗೂ ಅಧಿಕ ಮರಿಜುವಾನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇದು 2006ರ ಬಳಿಕ ಮೆಕ್ಸಿಕೊದೊಂದಿಗಿನ ಕ್ಯಾಲಿಫೋರ್ನಿಯ ಗಡಿಯ ಉದ್ದಕ್ಕೂ ಪತ್ತೆಯಾದ 13ನೆ ರಹಸ್ಯ ಭೂಗತ ಮಾರ್ಗವಾಗಿದೆ. ಸುರಂಗವು ಕೇವಲ ಮೂರು ಅಡಿ ಅಗಲವಾಗಿದ್ದು, ಬೆಳಕು ಮತ್ತು ಗಾಳಿಯ ವ್ಯವಸ್ಥೆಯನ್ನು ಹೊಂದಿತ್ತು.