×
Ad

ಸ್ಫೋಟಕ ದಾಂಡಿಗ ಕ್ರಿಸ್‌ಗೇಲ್ ಅಮ್ಮ ಕಡ್ಲೆಕಾಯಿ ಮಾರುತ್ತಿದ್ದರು!

Update: 2016-04-22 11:24 IST

ಹೊಸದಿಲ್ಲಿ, ಎಪ್ರಿಲ್ 22: ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್‌ಮೆನ್ ಕ್ರಿಸ್‌ಗೇಲ್ ತಂದೆಯಾಗಿದ್ದಾರೆ. ಅವರ ಗೆಳತಿ ನಟಾಶಾ ಬೈರಿಜ್ ಹೆಣ್ಣುಮಗುವಿಗೆ ಜನ್ಮವಿತ್ತಿದ್ದಾರೆ. ಗೇಲ್ ಮಗಳಿಗೆ ಬ್ಲೆಶ್ ಎಂದು ಹೆಸರಿಟ್ಟಿದ್ದಾರೆ. ಕ್ರಿಸ್‌ಗೇಲ್ ಜಮೈಕದ ಸಾಮಾನ್ಯ ಕುಟುಂಬದಲ್ಲಿ ಜನಿಸಿದ್ದರು. ಅವರ ತಂದೆ ಪೊಲೀಸ್ ಕಾನ್‌ಸ್ಟೇಬಲ್, ತಾಯಿ ಕಡ್ಲೆ ಕಾಯಿ ಮಾರುತ್ತಿದ್ದರು. ಗೇಲ್ ಆರು ಸಹೋದರರಲ್ಲಿ ಐದನೆಯವರು.

ಗೇಲ್ ಆರಂಭದಿಂದಲೇ ಕ್ರಿಕೆಟ್ ಇಷ್ಟದ ಆಟವಾಗಿತ್ತು. ಅವರು ಮೈದಾನದಲ್ಲಿದ್ದರೆ ಅವರ ಬ್ಯಾಟ್ ಮತ್ತು ಬೌಂಡರಿಗಳ ನಡುವೆ ಹೆಚ್ಚಿನ ದೂರ ಇಲ್ಲ ಎಂದು ಅನಿಸುತ್ತಿತ್ತು. ಗೇಲ್ ಸಮಾಜಸೇವಾ ಕಾರ್ಯದಲ್ಲಿ ಭಾಗವಹಿಸುವುದನ್ನು ಇಷ್ಟಪಡುತ್ತಾರೆ. ಅವರು ದಿ ಕ್ರಿಸ್ ಗೇಲ್ ಎಕೆಡೆಮಿಕ್ಸ್ ಹೆಸರಿನ ಸಂಸ್ಥೆಯನ್ನು ಜಮೈಕ ಮತ್ತು ಲಂಡನ್‌ನಲ್ಲಿ ತೆರೆದಿದ್ದಾರೆ. ಈ ಸಂಸ್ಥೆ ಉತ್ತಮ ಶಿಕ್ಷಣ ಕೊಡಿಸಲು ಮತ್ತು ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲು ಸ್ಕಿಲ್ ಡೆವಲೆಪ್‌ಮೆಂಟ್(_ಕೌಶಲ ತರಬೇತಿ) ಮಾಡುವತ್ತ ಗಮನಹರಿಸುತ್ತಿದೆ.

ಟೆಸ್ಟ್ ಕ್ರಿಕೆಟ್‌ನ 137 ವರ್ಷದ ಇತಿಹಾಸದಲ್ಲಿ ಮೊದಲ ಚೆಂಡಿಗೆ ಸಿಕ್ಸರ್ ಹೊಡೆದ ಜಗತ್ತಿನ ಮೊದಲ ಬ್ಯಾಟ್ಸ್‌ಮೆನ್ ಆಗಿ ದಾಖಲೆ ನಿರ್ಮಿಸಿದ್ದಾರೆ. ಗೇಲ್ 2012ರಲ್ಲಿ ಬಾಂಗ್ಲಾದೇಶದ ವಿರುದ್ಧ ಅವರು ಸಿಕ್ಸರ್ ಹೊಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News