×
Ad

ಮೃತ ವ್ಯಕ್ತಿಯಿಂದ ಪೋಲೀಸರ ವಿರುದ್ಧ ದೂರು !

Update: 2016-04-22 21:14 IST

ಚೆನ್ನೈ ,ಎ. 22 : ಚೆನ್ನೈ ಹೈ ಕೋರ್ಟ್ ನಲ್ಲಿ ಮೃತ ವ್ಯಕ್ತಿಯೊಬ್ಬ ಪೋಲೀಸರ ವಿರುದ್ಧ ದೂರು ದಾಖಲಿಸಿದ್ದಾನೆ  ! ಆ ದೂರನ್ನು ಗಂಭೀರವಾಗಿ ತೆಗೆದುಕೊಂಡಿರುವ ನ್ಯಾಯಾಲಯ ಪೊಲೀಸರಿಗೆ ಛೀಮಾರಿ ಹಾಕಿ ತನಿಖೆಗೆ ಐಜಿ ಮಟ್ಟದ ಪೊಲೀಸ್ ಅಧಿಕಾರಿಯನ್ನು ನೇಮಿಸಿದೆ ಮಾತ್ರವಲ್ಲ ತಪ್ಪು ಸಾಬೀತಾದರೆ ಪರಿಣಾಮ ಎದುರಿಸುತ್ತೀರಿ ಎಂದು ಪೊಲೀಸರಿಗೆ ಎಚ್ಚರಿಕೆಯನ್ನೂ ನೀಡಿದೆ. 

ಧರ್ಮಪುರಿ ಜಿಲ್ಲೆಯ ಕೃಷ್ಣನ್ ಎಂಬ ಯೋಧ ' ತಾನು ಜೀವಂತವಿರುವಾಗಲೇ ಪೊಲೀಸರು, ಕೊಲೆ ಆರೋಪ ಎದುರಿಸುತ್ತಿದ್ದು ವಿಚಾರಣಾ ಹಂತದಲ್ಲಿ ಮೃತಪಟ್ಟಿರುವ ತನ್ನ ಸೋದರನ ಬದಲು ತನ್ನ ಮರಣ ಪ್ರಮಾಣ ಪತ್ರ ಪಡೆದು ತಾನು ಸತ್ತಿರುವುದಾಗಿ ಸುಳ್ಳು ಹೇಳಿದ್ದಾರೆ ' ಎಂದು ಸಲ್ಲಿಸಿರುವ ಕ್ರಿಮಿನಲ್ ದೂರಿನ ವಿಚಾರಣೆ ನಡೆಸಿ  ಹೈ ಕೋರ್ಟ್ ತನಿಖೆಗೆ ಆದೇಶಿಸಿದೆ. ಇದಕ್ಕಾಗಿ ಐಜಿ ಮಟ್ಟದ ಅಧಿಕಾರಿ ಎ ಜಿ ಪೊನ್ ಮಾಣಿಕ್ಯವೆಲ್ ಅವರನ್ನು ನೇಮಿಸಿದೆ.

ಕೃಷ್ಣನ್ ಅವರ ಸೋದರ ಗೋವಿಂದಸ್ವಾಮಿ ಎಂಬವರು ಕೊಲೆ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದರು. ಆದರೆ ಪೊಲೀಸರು ಅವರ ಬದಲಿಗೆ ಅವರ ಸೋದರ ಕೃಷ್ಣನ್ ಅವರನ್ನೇ ಆರೋಪಿ ಎಂದು ಹೇಳಿ ಮೃತಪಟ್ಟ ಗೋವಿಂದಸ್ವಾಮಿ ಯ ಬದಲಿಗೆ ಕೃಷ್ಣನ್ ಅವರೇ ಮೃತಪಟ್ಟಿದ್ದಾರೆ ಎಂದು ಬಿಂಬಿಸಲು ಯತ್ನಿಸಿದರು ಎಂಬುದು ಕೃಷ್ಣನ್ ಅವರ ಆರೋಪ. 

ಇನ್ನು ತನಿಖೆಯ ಬಳಿಕವೇ ಯಾರು ಜೀವಂತವಿದ್ದಾರೆ, ಯಾರು ಮೃತಪಟ್ಟಿ ದ್ದಾರೆ  ಎಂಬುದು ಸಾಬೀತಾಗಲಿದೆ. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News