ಕನ್ಹಯ್ಯ ಮುಂಬೈ ಕಾರ್ಯಕ್ರಮಕ್ಕೆ ಇನ್ನೂ ದೊರೆಯದ ಸಭಾಂಗಣ

Update: 2016-04-22 18:29 GMT

ಮುಂಬೈ, ಎ.22: ಶನಿವಾರ ನಗರದಲ್ಲಿ ಆಲ್ ಇಂಡಿಯಾ ಯೂತ್ ಪೆಡರೇಶನ್ (ಎಐವೈಎಪ್) ಪ್ರಾಯೋಜಕತ್ವದಲ್ಲಿ ಜೆಎನ್‌ಯು ವಿದ್ಯಾರ್ಥಿ ನಾಯಕ ಕನ್ಹಯ್ಯಾ ಕುಮಾರ್ ಕಾರ್ಯಕ್ರಮವೊಂದು ನಡೆಯಲಿದೆಯಾದರೂ, ಇಲ್ಲಿಯ ತನಕ ಯಾರೂ ಕೂಡ ಕಾರ್ಯಕ್ರಮ ಆಯೋಜಕರಿಗೆ ತಮ್ಮ ಸಭಾಂಗಣಗಳನ್ನು ಬಾಡಿಗೆಗೆ ನೀಡಲು ಸಿದ್ಧರಾಗಿಲ್ಲ. ಆಯೋಜಕರು ಕೊನೆಗೆ ವೊರ್ಲಿಯಲ್ಲಿರುವ ಜನತಾ ಶಿಕ್ಷಣ ಸಂಸ್ಥಾವನ್ನು ಸಂಪರ್ಕಿಸಿದರೂ ಮುಂಬೈ ಪೊಲೀಸರು ವಿಧಿಸಿರುವ ಹಲವು ಷರತ್ತುಗಳ ಕಾರಣ ಕಾರ್ಕ್ರಮ ಅಲ್ಲಿಯೂ ನಡೆಯಲು ಸಾಧ್ಯವಿಲ್ಲ.

‘‘ನಾವು ಕನಿಷ್ಠ ಆರು ಸಭಾಂಗಣಗಳ ಮಾಲಕರನ್ನು ಸಂಪರ್ಕಿಸಿದ್ದೇವೆ. ಆದರೆ ಕನ್ಹಯ್ಯ ಹೆಸರು ಕೇಳಿದೊಡನೆ ಅವರು ಸಭಾಂಗಣ ಬಾಡಿಗೆಗೆ ನೀಡಲು ಒಪ್ಪುತ್ತಿಲ್ಲ,’’ ಎಂದು ಸಿಪಿಐ ನಾಯಕ ಪ್ರಕಾಶ್ ರೆಡ್ಡಿ ತಿಳಿಸಿದ್ದಾರೆ. ‘‘ನಾವು ಕೊನೆಗೆ ವೊರ್ಲಿಯಲ್ಲಿರುವ ಶಾಲೆಯನ್ನು ಸಂಪರ್ಕಿಸಿದಾಗ ಆಹ್ವಾನ ಪತ್ರಿಕೆ ಹೊಂದಿರುವವರಿಗೆ ಮಾತ್ರ ಪ್ರವೇಶ ನೀಡಬೇಕೆಂದು ಪೊಲೀಸರು ತಿಳಿಸಿದರು. ಅನೇಕ ಜನರು ಕನ್ಹಯ್ಯಿ ಮಾತನಾಡುವುದನ್ನು ಕೇಳಬೇಕೆಂದಿರುವಾಗ ಇದು ಸಾಧ್ಯವಿಲ್ಲ. ಅವರಿಗೆ ನಾವು ಪ್ರವೇಶ ನಿರಾಕರಿಸಲು ಸಾಧ್ಯವಿಲ್ಲ,’’ಎಂದು ರೆಡ್ಡಿ ಹೇಳಿದರು. ಕೇಸರಿ ಪಡೆಗಳಿಂದ ವಿಶ್ವವಿದ್ಯಾನಿಲಯಗಳ ರಾಜಕೀಕರಣ ವಿಚಾರದ ಮೇಲೆ ಶನಿವಾರದ ಸಭೆಯಲ್ಲಿ ಕನ್ಹಯ್ಯಾ ಮಾತನಾಡಲಿದ್ದಾರೆ. ಕೆಲ ಬಲಪಂಥೀಯ ಸಂಘಟನೆಗಳು ಈ ಕಾರ್ಯಕ್ರಮವನ್ನು ನಡೆಯಲು ಬಿಡುವುದಿಲ್ಲವೆಂದು ಎಚ್ಚರಿಸಿವೆ. ಎಬಿವಿಪಿ ಕನ್ಹಯ್ಯಾ ಬೇಟಿ ಸಂದರ್ಭ ಪ್ರತಿಭಟನೆ ನಡೆಸುವ ಸಾಧ್ಯತೆಯೂ ಇದೆ.

ತರುವಾಯ ಮಹಾರಾಷ್ಟ್ರ ನವನಿರ್ಮಾಣ್ ಸೇನಾ ತಾನು ಕನ್ಹಯ್ಯಗೆ ರಕ್ಷಣೆ ನೀಡುವುದಾಗಿ ಹೇಳಿದೆಯೆಂಬ ವರದಿಗಳನ್ನು ನಿರಾಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News