×
Ad

ನಾರಾಯಣ ಗುರು ಜಯಂತಿ: ಸರಕಾರಕ್ಕಿರಬೇಕಾದ ಎಚ್ಚರ

Update: 2016-04-23 00:08 IST

ಮಾನ್ಯರೆ,

ಕರಾವಳಿಗೆ ಆಗಮಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರಕಾರದಿಂದಲೇ ನಾರಾಯಣ ಗುರು ಜಯಂತಿ ಆಚರಿಸುವ ಘೋಷಣೆಯನ್ನು ಹೊರಡಿಸಿದ್ದಾರೆ. ಇದು ನಿಜಕ್ಕೂ ಶ್ಲಾಘನೀಯ. ಆದರೆ ಸರಕಾರ ಜಯಂತಿಯನ್ನು ಆಚರಿಸುವಾಗ ಹಲವು ಸಮಸ್ಯೆಗಳು ಎದುರಾಗಿರುವುದನ್ನು ನಾವು ನೋಡಿದ್ದೇವೆ. ಟಿಪ್ಪು ಜಯಂತಿಯ ವಿರುದ್ಧ ವ್ಯಾಪಕವಾಗಿ ಆಕ್ಷೇಪಗಳು ಕೇಳಿ ಬಂದವು. ಇದೀಗ ನಾರಾಯಣಗುರು ಜಯಂತಿ ಆಚರಿಸುವಾಗಲಾದರೂ ಸರಕಾರಕ್ಕೆ ಕೆಲವು ಎಚ್ಚರಿಕೆ ಇರಬೇಕಾಗಿದೆ.

ಅದರಲ್ಲಿ ಮುಖ್ಯವಾಗಿ, ನಾರಾಯಣ ಗುರು ಅವರು ಬ್ರಾಹ್ಮಣ್ಯವಾದವನ್ನು, ಮಠಾಧೀಶರನ್ನು, ಜಾತೀಯವಾದಿಗಳನ್ನು ವಿರೋಧಿಸುತ್ತಾ ಬಂದವರು. ನಾಳೆ ಕನ್ನಡ ಸಂಸ್ಕೃತಿ ಇಲಾಖೆಯ ಮೂಲಕ ನಾರಾಯಣಗುರು ಜಯಂತಿ ಆಚರಿಸುವಾಗ, ಅಲ್ಲಿ ಪೇಜಾವರರಂತಹ ಸ್ವಾಮೀಜಿಗಳನ್ನು ಕೂರಿಸಿ ಕಾರ್ಯಕ್ರಮ ನಡೆಸಿದರೆ ನಾರಾಯಣಗುರು ಅವರಿಗೆ ಮಾಡುವ ಅನ್ಯಾಯವಾಗುತ್ತದೆ. ಹಾಗೆಯೇ ಬಿಜೆಪಿ ಅಧಿಕಾರಕ್ಕೆ ಬಂದಾಗ, ಈ ಜಯಂತಿ ಬೇರೆಯೇ ಸ್ವರೂಪ ಪಡೆಯುವ ಸಾಧ್ಯತೆಗಳೂ ಇವೆ. ಆಗ ನಾರಾಯಣ ಗುರು ಚಿಂತನೆಗಳೇ ತಿರುಚಲ್ಪಡುವ ಸಾಧ್ಯತೆಗಳಿವೆ. ಆದುದರಿಂದ ನಾರಾಯಣ ಗುರು ಚಿಂತನೆಗಳಿಗೆ ಧಕ್ಕೆ ಬರದ ಹಾಗೆ ಜಯಂತಿಯನ್ನು ಆಚರಿಸುವುದೂ ಸರಕಾರದ ಕರ್ತವ್ಯವಾಗಿದೆ. ಇಲ್ಲವಾದರೆ ಅಂತಹ ಜಯಂತಿಯ ಆಚರಣೆಯ ಅಗತ್ಯವೇ ಇಲ್ಲ.

                                                                           ಅರುಣಾ ಬಿಲ್ಲವ, ಕಾಸರಗೋಡು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News