×
Ad

ಇಂಡೊನೇಶಿಯದಲ್ಲಿ ಮೃತರ ಸ್ಮರಣೆ ಗೋರಿಯಿಂದ ಶವ ಮೇಲೆತ್ತಿ ಮೆರವಣಿಗೆ!

Update: 2016-04-23 12:01 IST

ಜಕಾರ್ತ, ಎಪ್ರಿಲ್ 23: ಯಾರಿಗೂ ನಂಬಲಿಕ್ಕೆ ಸ್ವಲ್ಪಕಷ್ಟ ಆಗಬಹುದು. ಆದರೆ ಇಂಡೊನೇಶಿಯದ ಟೊರೊಜದ ವಂಶಸ್ಥರು ಮೃತ ಬಂಧುಗಳ ಗೋರಿಯನ್ನು ಅಗೆದು ಅವರ ಮೃತದೇಹವನ್ನು ಹೊರಗೆ ತೆಗೆದು ಹೊಸ ಬಟ್ಟೆ ಹಾಕಿ ಅದನ್ನು ಎತ್ತಿಕೊಂಡು ಬೀದಿಯಲ್ಲಿ ಮೆರವಣಿಗೆ ನಡೆಸಿ ಮೃತರ ಸ್ಮರಣೆಯ ಆಚರಣೆ ನಡೆಸುತ್ತಿದ್ದಾರೆ.

ಆರೇಳು ವರ್ಷ ಹಳೆಯ ಮೃತದೇಹಗಳನ್ನು ಕೂಡಾ ಹೊರಗೆ ತೆಗೆಯುತ್ತಾರಂತೆ. ಅವರು ಮೃತದೇಹಗಳನ್ನು ವಿಶೇಷ ರೀತಿಯಲ್ಲಿ ಸಂಸ್ಕರಿಸುವುದರಿಂದ ಮೃತದೇಹಕ್ಕೆ ಹೆಚ್ಚಿನ ಹಾನಿ ಸಂಭವಿಸಿರುವುದಿಲ್ಲ. ಇಂಡೊನೇಶಿಯಾ ಸೌತ್ ಸುಲವೇಸಿ ಬೆಟ್ಟತಪ್ಪಲಿನಲ್ಲಿಟೊರೊಜ ವಿಭಾಗದವರು ವಾಸಿಸುತ್ತಿದ್ದಾರೆ.

ಈ ಅವರ ಆಚರಣೆಗೆ ಶವಶುದ್ಧೀಕರಣ ಉತ್ಸವ ಎಂದು ಹೆಸರು. ಈ ಆಚರಣೆಯಲ್ಲಿ ಗೋರಿಯಿಂದ ಶವವನ್ನು ಹೊರತೆಗೆದು ಸ್ನಾನ ಮಾಡಿಸಿ ಹೊಸ ಫ್ಯಾಶನ್‌ನ ಬಟ್ಟೆಗಳನ್ನು ಅವರು ಅದಕ್ಕೆ ತೊಡಿಸುತ್ತಾರೆ. ಕೂಲ್‌ಗಾಗಲ್ಸ್‌ಗಳನ್ನೂ ಹಾಕುತ್ತಾರೆ. ದಾರಿಯಲ್ಲಿ ಸುತ್ತಾಡಿಸುತ್ತಾರೆ.

ಶವ ಸಂಸ್ಕಾರವನ್ನು ಜೀವನದ ಅತ್ಯಂತ ಪ್ರಧಾನ ಕಾರ್ಯವಾಗಿ ಟೊರೊಜ ವಂಶಸ್ಥರು ಭಾವಿಸಿದ್ದಾರೆ. ತಮ್ಮ ಪೂರ್ವಜ ಗೋತ್ರ ನಾಯಕರು ಮತ್ತು ಅವರ ಮಿತ್ರರನ್ನು ಗೌರವಿಸಲಿಕ್ಕಾಗಿ ಅವರು ಹೀಗೆಮಾಡುತ್ತಾರೆ. ಅವರ ಶವಶುದ್ಧೀಕರಣ ಆಚರಣೆ ಮುಗಿದ ಮೇಲೆ ಶವದ ಮೇಲೆತೊಡಿಸಿದ ಬಟ್ಟೆಗಳನ್ನು ಕಳಚುತ್ತಾರೆ ಮತ್ತು ಪುನಃ ಮೃತದೇಹವನ್ನು ಗೋರಿಯೊಳಗೆ ಸೇರಿಸುತ್ತಾರೆ. ಇವರು ಶವಸಂಸ್ಕಾರ ನಡೆಸುವಗೋರಿಗಳ ಪಕ್ಕವೇ ವಾಸಿಸುತ್ತಾರೆ ಎಂದು ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News