×
Ad

ತಾಪಮಾನ ಕಡಿಮೆಗೊಳಿಸಲು ಜಾಗತಿಕ ರಾಷ್ಟ್ರಗಳ ಪ್ರತಿಜ್ಞೆ!

Update: 2016-04-23 12:09 IST

ನ್ಯೂಯಾರ್ಕ್, ಎಪ್ರಿಲ್ 23: ಹೆಚ್ಚಳಗೊಳ್ಳುತ್ತಿರುವ ಉಷ್ಣತೆಯನ್ನು ಕಡಿಮೆಗೊಳಿಸಲು ಜಾಗತಿಕ ರಾಷ್ಟ್ರಗಳು ಸೂಕ್ತಕ್ರಮ ಕೈಗೊಳ್ಳುವುದಾಗಿ ಪ್ರತಿಜ್ಞೆ ಗೈದಿವೆ ಎಂದು ವರದಿಯಾಗಿದೆ. ಹವಾಮಾನ ವೈಪರೀತ್ಯ ರೂಪುರೇಷೆ ಕನ್‌ವೆನ್ಶನ್‌ನ ಸದಸ್ಯ 1996 ದೇಶಗಳು ಪ್ಯಾರಿಸ್‌ನಲ್ಲಿ ಸಹಿಹಾಕಿದ್ದ 2015 ಡಿಸೆಂಬರ್ 12ರಲ್ಲಿ ಪಾಸುಮಾಡಿರುವ ಆದ್ಯಾದೇಶಕ್ಕೆ ಭಾರತ ಸಹಿತ 150ಕ್ಕೂ ಹೆಚ್ಚಿನ ರಾಷ್ಟ್ರಗಳು ಶುಕ್ರವಾರ ಸಹಿಹಾಕಿವೆ.

ಕಾರ್ಬನ್ ಹೊರಬಿಡುತ್ತಿರುವುದರಲ್ಲಿ ನಿರ್ಣಾಯ ಪಾತ್ರವಿರುವ ಭಾರತವಲ್ಲದೆ, ಚೀನ, ಯುಎಸ್, ರಷ್ಯ, ಜಪಾನ್ ರಾಷ್ಟ್ರಗಳೂ ಸಹಿಹಾಕಿವೆ. ವಿಶ್ವಸಂಸ್ಥೆ ಜನರಲ್ ಅಸೆಂಬ್ಲಿ ಸಭಾಂಗಣದಲ್ಲಿ ಪ್ರಧಾನಕಾರ್ಯದರ್ಶಿ ಬಾನ್‌ಕಿಮೂನ್ ಅಧ್ಯಕ್ಷತೆಯಲ್ಲಿ ಈ ಸಭೆ ನಡೆದಿತ್ತು. ಫ್ರೆಂಚ್ ಅಧ್ಯಕ್ಷ ಫ್ರಾಂಗ್ಸ್‌ವಾ ಓಲೆಂಡ್, ಸಿಒಪಿಅಧ್ಯಕ್ಷ ಸಿಗೊಲಿನ್ ರೋಯಲ್ ಉಪಸ್ಥಿತರಿದ್ದರು.

ಹವಾಮಾನ ನ್ಯಾಯ ಎಂಬ ಭಾರತ ಮುಂದಿಟ್ಟ ವಿಷಯಕ್ಕೆ ಪ್ರಧಾನ ಅಂಗೀಕಾರ ಮತ್ತು ಸುಸ್ಥಿರ ಜೀವನ ಶೈಲಿ ಮತ್ತು ಸುಸ್ಥಿರ ಬಳಕೆದಾರ ಮಾದರಿಗೆ ಆದ್ಯತೆ ಕೊಟ್ಟು ಒಪ್ಪಂದದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಭಾರತ ಪ್ರತಿಕ್ರಿಯಿಸಿದೆ.

ವಿಶ್ವದಲ್ಲಿ ಒಟ್ಟು ವಿಷವಾಯು ಹೊರಬಿಡುತ್ತಿರುವ ರಾಷ್ಟ್ರಗಳಲ್ಲಿ ಶೆ. 55ರಷ್ಟು ಚೀನಾವೊಂದೇ ಹೊರಬಿಡುತ್ತಿದೆ. ಅದು ಶೇ.20, ಅಮೆರಿಕ ಶೆ.17.8, ರಷ್ಯಾ ಶೇ.7.5 ಭಾರತ ಶೇ. 4.1, ಜಪಾನ್ ಶೇ.3.7 ವಿಷಯವಾಯುವನ್ನು ವಾತಾವರಣಕ್ಕೆ ಬಿಡುತ್ತಿವೆ ಎಂದು ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News