×
Ad

2022ರ ವಿಶ್ವಕಪ್ ಫುಟ್ಬಾಲ್ ಕತರ್‌ನಲ್ಲಿಯೇ ನಡೆಯಲಿದೆ: ಫಿಫ ಅಧ್ಯಕ್ಷ ಇನ್ಫೆಂಟಿನೊ

Update: 2016-04-23 13:33 IST

ದೋಹ, ಎಪ್ರಿಲ್ 23: 2022ರ ವಿಶ್ವಕಪ್ ಫುಟ್ಬಾಲ್ ಈಗಾಗಲೇ ನಿರ್ಧರಿಸಿರುವಂತೆ ಕತರ್‌ನಲ್ಲಿಯೇ ನಡೆಸಲಾಗುವುದು ಎಂದು ಫಿಫ ಅಧ್ಯಕ್ಷ ಜಿಯಾನಿ ಇನ್ಫೆಂಟಿನೊ ಹೇಳಿದ್ದಾರೆ. ವಿಶ್ವಕಪ್ ಸಿದ್ಧತೆಯ ನಿರ್ಮಾಣ ಕಾಮಗಾರಿ ಕೆಲಸಗಾರರ ಯೋಗಕ್ಷೇಮ ನೋಡಿಕೊಳ್ಳುವುದಕ್ಕಾಗಿ ಫಿಫ ಹೊಸ ಸ್ವತಂತ್ರ ಸಮಿತಿಯನ್ನು ನಿಯೋಜಿಸಲಲಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರೆಂದು ವರದಿಯಾಗಿದೆ. ಸಮಿತಿಯಲ್ಲಿ ಫಿಫ ಪ್ರತಿನಿಧಿಗಳು ಸದಸ್ಯರಾಗಿರಲಿದ್ದಾರೆ. ಕತರ್ ವಿಶ್ವಕಪ್ ಸಂಘಟಕ ಸಮಿತಿ, ಕಾರ್ಮಿಕರಿಗಾಗಿ ಜಾರಿಗೆ ತಂದ ವಿವಿಧ ಕಲ್ಯಾಣ ಯೋಜನೆಗಳ ಮೇಲ್ನೋಟವನ್ನು ಸಮಿತಿ ವಹಿಸಿಕೊಳ್ಳಲಿದೆ. ಫಿಫ ಎಲ್ಲ ಸ್ಫರ್ಧೆಗಳಲ್ಲಿಯೂ ಈ ಸಮಿತಿಯ ಮೇಲ್ನೋಟವಿರುವುದೆಂದು ಅವರು ಹೇಳಿದ್ದಾರೆ.

  ವಿಶ್ವಕಪ್‌ನ್ನು ಯಶಸ್ವಿಗೊಳಿಸಲು ಅಗತ್ಯವಾದ ಎಲ್ಲ ಸೌಕರ್ಯಗಳನ್ನು ಒದಗಿಸಲಾಗುವುದೆಂದು ಕತರ್ ಭರವಸೆ ನೀಡಿದೆ. ವಿಶ್ವಕಪ್‌ಗಾಗಿ ಸ್ಟೇಡಿಯಂ ಕಟ್ಟಡಗಳ ನಿರ್ಮಾಣ ಸುರಕ್ಷಿತ ವಾತಾವರಣದಲ್ಲಿ ನಡೆಯುತ್ತಿವೆ. ಕತರ್‌ನಲ್ಲಿ ಕಾರ್ಮಿಕರ ಸ್ಥಿತಿಗತಿಗಳಕುರಿತು ಸುಪ್ರೀಂ ಕಮಿಟಿಫಾರ್ ಡೆಲಿವರಿ ಆಂಡ್ ಲೆಗಸಿ ಅಧಿಕಾರಿಗಳು ತಿಳಿಸಿದ್ದೆಲ್ಲವೂ ಸರಿಯಾಗಿದೆ ಎಂದು ಹೇಳಿದ ಫಿಫ ಅಧ್ಯಕ್ಷರು ವಿಶ್ವಕಪ್‌ಗೆ ಸಂಬಂಧಿಸಿದ ಎಲ್ಲ ವಿಷಯಗಳನ್ನು ಗಮನಿಸಲಾಗುತ್ತಿದೆ ಎಂದು ಹೇಳಿದರು. ಕತರ್ ಫುಟ್ಬಾಲ್ ಅಸೋಸಿಯೇಶನ್ ಅಧ್ಯಕ್ಷ ಶೈಕ್ ಹಮದ್ ಬಿನ್ ಖಲೀಫ ಬಿನ್ ಅಹ್ಮದ್ ಅಲ್ಥಾನಿ, ಸುಪ್ರೀಂ ಕಮಿಟಿ ಫಾರ್ ಡೆಲಿವರಿ ಆಂಡ್ ಲೆಗಸಿ ಕಾರ್ಯದರ್ಶಿ ಜನರಲ್ ಹಸನ್ ಅಲ್ ತವಾದಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಫಿಫ ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿ ಕತರ್‌ಗೆ ಬಂದು ಇನ್ಫೆಂಟಿನೊ ಖಲೀಫ ಇಂಟರ್‌ನ್ಯಾಶನಲ್ ಸ್ಟೇಡಿಯಂ ಸಂದರ್ಶಿಸಿ ನಿರ್ಮಾಣ ಕಾಮಗಾರಿಗಳ ಪ್ರಗತಿಯನ್ನು ಅವಲೋಕನ ನಡೆಸಿದ್ದಾರೆ. ಅಮೀರ್ ಶೈಕ್ ತಮೀಂ ಬಿನ್ ಹಮದ್ ಅಲ್‌ಥಾನಿ ಮತ್ತು 2022 ವಿಶ್ವಕಪ್ ಸಂಘಟಕ ಹಿರಿಯ ಅಧಿಕಾರಿಗಳೊಂದಿಗೆ ಅವರು ಭೇಟಿ ಮಾಡಲಿದ್ದಾರೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News