7 ವರ್ಷದ ತಝಮುಲ್ ಇಸ್ಲಾಮ್ ವಿಶ್ವ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾರತದ ಪ್ರಪ್ರಥಮ ಸ್ಪರ್ಧಿ
ಶ್ರೀನಗರ, ಎ.23: ಉತ್ತರ ಕಾಶ್ಮೀರದ ಬಂಡಿಪೊರಾ ಜಿಲ್ಲೆಯ ಸಣ್ಣ ಹಳ್ಳಿಯೊಂದರ ಏಳು ವರ್ಷದ ಬಾಲಕಿ ತಝಮುಲ್ ಇಸ್ಲಾಮ್ ಇಟೆಲಿಯ ಏಂಡ್ರಿಯಾದಲ್ಲಿ ನಡೆಯಲಿರುವ ವಿಶ್ವ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್‌ನಲ್ಲಿ ಭಾರತದ ಪ್ರಥಮ ಸ್ಪರ್ಧಿಯಾಗಿದ್ದಾಳಲ್ಲದೆ ಕಿಕ್ ಬಾಕ್ಸಿಂಗ್ ನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯೊಂದರಲ್ಲಿ ಭಾಗವಹಿಸುತ್ತಿರುವ ಪ್ರಥಮ ಕಾಶ್ಮೀರಿ ಬಾಲಕಿಯಾಗಿದ್ದಾಳೆ.
ಬಡ ಕುಟುಂಬದ ಹುಡುಗಿಯಾಗಿರುವ ತಝಮುಲ್ ಳ ತಂದೆ ಗುಲಾಂ ಮುಹಮ್ಮದ್ ಲೊನೆ ಹಿಂದುಸ್ಥಾನ್ ಕನ್‌ಸ್ಟ್ರಕ್ಷನ್ ಕಂಪೆನಿಯಲ್ಲಿ ಚಾಲಕನಾಗಿದ್ದಾರೆ.
ಬಂಡಿಪೊರಾದಲ್ಲಿ ನಡೆದ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಜಮ್ಮು ಕಾಶ್ಮೀರದ ಅತ್ಯುತ್ತಮ ಫೈಟರ್ ಪ್ರಶಸ್ತಿ 2014ರಲ್ಲಿ ಪಡೆದಿರುವ ತಝಮುಲ್ ಇಸ್ಲಾಮ್ ನವದೆಹಲಿಯಲ್ಲಿ ಕಳೆದ ಡಿಸೆಂಬರ್ ತಿಂಗಳಲ್ಲಿ ನಡೆದ ರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಸ್ಪರ್ಧೆಯ ಸಬ್ ಜೂನಿಯರ್ ವಿಭಾಗದಲ್ಲಿ ಚಿನ್ನದ ಪದಕ ಪಡೆದು ಈ ವರ್ಷದ ವಿಶ್ವ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ.
ಆಕೆಯ ಕೋಚ್ ಫೈಝಲ್ ಅಲಿ ದರ್ ತನ್ನ ವಿದ್ಯಾರ್ಥಿನಿಯ ಸಮರ್ಪಣಾ ಮನೋಭಾವವನ್ನು ಪ್ರಶಂಸಿಸಿದ್ದಾರೆ. ತಝಮುಲ್ ಇಸ್ಲಾಮ್ ವಿಶ್ವ ಮಟ್ಟದ ಸ್ಪರ್ಧೆಯಲ್ಲಿ ಯಶಸ್ವಿಯಾಗಲಿದ್ದಾಳೆಂಬ ಆತ್ಮವಿಶ್ವಾಸವನ್ನುಕಿಕ್ ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾದ ಉಪಾಧ್ಯಕ್ಷ ಗುಲಾಂ ನಬಿ ತಂತ್ರೆ ವ್ಯಕ್ತಪಡಿಸಿದ್ದಾರೆ.