ನವಾಝ್ ಶರೀಫ್ ಪಾಕಿಸ್ತಾನದ ರಾಜಕಾರಣಿಗಳಲ್ಲೇ ಅತಿದೊಡ್ಡ ಶ್ರೀಮಂತರಲ್ಲಿ ಒಬ್ಬರು
ಇಸ್ಲಾಮಾಬಾದ್, ಎಪ್ರಿಲ್ 23: ಪನಾಮ ಪೇಪರ್ಸ್ ಲೀಕ್ ಪ್ರಕರಣದಲ್ಲಿ ಬಹಿರಂಗಗೊಂಡ ಬಳಿಕ ವಿಪಕ್ಷಗಳ ಟೀಕೆಗೆ ಗುರಿಯಾದ ಪಾಕಿಸ್ತಾನದ ಪ್ರಧಾನ ಮಂತ್ರಿ ನವಾಝ್ ಶರೀಫ್ ಪಾಕಿಸ್ತಾನದ ರಾಜಕಾರಣಿಗಳಲ್ಲೇ ಅತಿದೊಡ್ಡ ಶ್ರೀಮಂತರಲ್ಲಿ ಒಬ್ಬರು ಎಂದು ವರದಿಯಾಗಿದೆ. ಅವರ ಖಾಸಗಿ ಆಸ್ತಿ ಎರಡು ಬಿಲಿಯನ್ ರೂಪಾಯಿಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ನವಾಝ್ ಶರೀಫ್‌ರ ಸಂಪತ್ತಿನಲ್ಲಿ ಜಬರದಸ್ತು ಹೆಚ್ಚಳವಾಗಿದೆ.
ಪಾಕಿಸ್ತಾನಿ ಚುನಾವಣಾ ಆಯೋಗಕ್ಕೆ ಶುಕ್ರವಾರ 2015ರ ಆಸ್ತಿವಿವರ ಸಲ್ಲಿಸಲಾಗಿದ್ದು ಅವರ ಸಂಪತ್ತು 2 ಬಿಲಿಯನ್ ರೂಪಾಯಿ ಆಗಿದೆ. ಕಳೆದ ನಾಲ್ಕುವರ್ಷಗಳಲ್ಲಿನವಾರ್ ಶರೀಫ್‌ರ ಸಂಪತ್ತಿನಲ್ಲಿ 1 ಅರಬ್ ರೂಪಾಯಿ ಹೆಚ್ಚಳವಾಗಿದೆ. ಅದೇವೇಳೆ ನವಾಝ್ ಶರೀಫ್ ಚುನಾವಣಾ ಆಯೋಗಕ್ಕೆ ನೀಡಿದ ಅಫಿದಾವಿತ್‌ನಲ್ಲಿ ವಿದೇಶದಲ್ಲಿ ಯಾವುದೇ ಆಸ್ತಿ ಇಲ್ಲ ಎಂದು ತಿಳಿಸಿದ್ದಾರೆ. 2011ರಲ್ಲಿ ನವಾರ್ ಶರೀಫ್‌ರ ಆಸ್ತಿ 166 ಮಿಲಿಯನ್ ಆಗಿತ್ತು. 2012ರಲ್ಲಿ 261.6 ಮಿಲಿಯನ್ ಆಯಿತು. 2013ರಲ್ಲಿ ತನ್ನನ್ನು ಬಿಲಿಯಾಧೀಶ ಎಂದು ಘೋಷಿಸಿದ್ದರು, ತನ್ನ ಆಸ್ತಿ 1.82 ಬಿಲಿಯನ್ ಎಂದಿದ್ದರು.
ಚುನಾವಣೆ ಆಯೋಗದ ಮಾಹಿತಿ ಪ್ರಕಾರ 2015ರಲ್ಲಿ ನವಾಝ್ ಶರೀಫ್‌ರ ಪುತ್ರನ ಕಡೆಯಿಂದ 215ಮಿಲಿಯನ್ ರೂಪಾಯಿ ನೀಡಲಾಗಿತ್ತು. ಪಾಕಿಸ್ತಾನದ ಪತ್ರಿಕೆ ದ ಡಾನ್ ವರದಿಯಂತೆ ಅಜ್ಞಾತವ್ಯಕ್ತಿಯೊಬ್ಬ 1 ಲ್ಯಾಂಡ್ ಕ್ರೂಝರ್ ಮತ್ತು 2 ಮರ್ಸಿಡಿಸ್ ಕಾರನ್ನು ಉಡುಗೊರೆಯನ್ನಾಗಿ ನೀಡಿದ್ದಾನೆ ಎಂದು ವರದಿಗಳು ತಿಳಿಸಿವೆ