3 ದಿನದ ಮಗುವನ್ನು ಕಚ್ಚಿ ಕೊಂದ ಮನೆಯ ನಾಯಿ
Update: 2016-04-23 16:53 IST
ಸ್ಯಾನ್ ಡೀಗೊ, ಎ. 23: ಮೂರು ದಿನದ ಮಗುವೊಂದನ್ನು ಮನೆಯೇ ನಾಯಿಯೇ ಕಚ್ಚಿ ಕೊಂದ ಘಟನೆ ಅಮೆರಿಕದ ಸ್ಯಾನ್ ಡೀಗೊದಲ್ಲಿ ನಡೆದಿದೆ.
ಹೆತ್ತವರು ಗುರುವಾರ ರಾತ್ರಿ ನವಜಾತ ಶಿಶು ಮತ್ತು ನಾಯಿಯೊಂದಿಗೆ ಮಂಚದಲ್ಲಿ ಕುಳಿತು ಟಿವಿ ನೋಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಆಗ ಮಗುವಿನ ತಾಯಿ ಕೆಮ್ಮಿದರು. ಇದರಿಂದ ಬೆದರಿದ ನಾಯಿ ಒಮ್ಮೆಲೇ ಮಗುವನ್ನು ಕಚ್ಚಿತು ಎಂದು ಪೊಲೀಸರು ತಿಳಿಸಿದರು.
ಗಂಡ ಮತ್ತು ಹೆಂಡತಿ ತಮ್ಮ ಮಗುವನ್ನು ನಾಯಿಯಿಂದ ಬೇರ್ಪಡಿಸಿ ಆಸ್ಪತ್ರೆಗೆ ಸಾಗಿಸಿದರು. ಆದರೆ, ಮಗು ಸತ್ತಿದೆ ಎಂದು ಅಲ್ಲಿ ಘೋಷಿಸಲಾಯಿತು.
ಪ್ರಾಣಿ ನಿಯಂತ್ರಣ ಅಧಿಕಾರಿಗಳು ‘ಪೋಲೊ’ ಎಂಬ ಹೆಸರಿನ ‘ಅಮೆರಿಕನ್ ಸ್ಟಾಫರ್ಡ್‌ಶಯರ್ ಟೆರಿಯರ್’ ಜಾತಿಯ ಗಂಡು ನಾಯಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ನಾಯಿಗೆ ಹುಚ್ಚು ಹಿಡಿದಿದೆಯೇ ಎಂಬುದನ್ನು ನಿರ್ಧರಿಸಲು ಅದನ್ನು 10 ದಿನಗಳ ಕಾಲ ಪ್ರತ್ಯೇಕವಾಗಿ ಇಡಲಾಗುವುದು.