×
Ad

ಬಿಜೆಪಿಗೆ ಹೊಸ ಪ್ರಶಾಂತ್ ಕಿಶೋರ್ ಆಗಮನ

Update: 2016-04-24 11:45 IST

ಲೋಕಸಭಾ ಚುನಾವಣೆಯ ಬಳಿಕ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ರನ್ನು ಉಳಿಸಿಕೊಳ್ಳಲು ವಿಫಲವಾಗಿ ಬಿಹಾರದಲ್ಲಿ ಭಾರೀ ಬೆಲೆಯನ್ನೇ ತೆತ್ತ ಬಿಜೆಪಿ ಈಗ ಅಸ್ಸಾಂ ಹಣಾಹಣಿಗೆ ಹೊಸ 'ಪ್ರಶಾಂತ್ ಕಿಶೋರ್' ನನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ.

ಹಾರ್ವರ್ಡ್ ವಿವಿಯಿಂದ ಸಾರ್ವಜನಿಕ ನೀತಿನಿರೂಪಣೆಯಲ್ಲಿ ಪದವಿ ಪಡೆದಿರುವ ರಜಥ್ ಸೇಥಿ ಕಳೆದ ಅಕ್ಟೋಬರ್ ನಿಂದಲೇ ಅಸ್ಸಾಂ ನಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ವೇದಿಕೆ ಸಿದ್ಧಪಡಿಸುತ್ತಿದ್ದಾರೆ.  ಪ್ರಶಾಂತ್ ರ ತಂಡ ಬಿಟ್ಟಿರುವ ಇಬ್ಬರು ಈಗ ರಜಥ್ ಜೊತೆ ಬಿಜೆಪಿಗೆ ಕೆಲಸ ಮಾಡುತ್ತಿದ್ದಾರೆ. ಬಿಹಾರದಲ್ಲಿ ಮಾಡಿದ ತಪ್ಪು ಪುನರಾವರ್ತನೆ ಆಗದಂತೆ ಅಸ್ಸಾಂ ನಲ್ಲಿ ಸ್ಥಳೀಯ ನಾಯಕರನ್ನೇ ಹೈಲೈಟ್ ಮಾಡಲಾಗುತ್ತಿದೆ. ಆಗಾಗ ಪ್ರಧಾನಿ ಮೋದಿ, ಅಮಿತ್ ಶಾ, ಸುಷ್ಮಾ ಸ್ವರಾಜ್ ಹಾಗೂ ರಾಜ್‌ನಾಥ್ ಸಿಂಗ್ ಸಿಂಗ್ ಆಗಾಗ ಕೆಲವು ಭೇಟಿ ನೀಡಿದ್ದಾರೆ ಅಷ್ಟೇ. ರಾಜ್ಯದ ಪ್ರತಿ ಬಿಜೆಪಿ ಸಂಸದರಿಗೆ ಕೆಲವು ಕ್ಷೇತ್ರಗಳ ಜವಾಬ್ದಾರಿ ನೀಡಲಾಗಿದೆ. ಹಿಂದೂಗಳು ಬಹುಸಂಖ್ಯಾತರಾಗಿರುವ 90 ಕ್ಷೇತ್ರಗಳಿಗೆ ವಿಶೇಷ ಗಮನ ನೀಡಿ ಮುಸ್ಲಿಮರು ಬಹುಸಂಖ್ಯಾತರಾಗಿರುವ 30 ಕ್ಷೇತ್ರಗಳು ಕಾಂಗ್ರೆಸ್ ಅಥವಾ ಎಐಯುಡಿಫ್ ಗೆ ಹೋದರೂ ಪರವಾಗಿಲ್ಲ ಎಂದು ಬಿಡಲಾಗಿದೆ.

ಬಿಜೆಪಿಗರು ರಜಥ್ ಸೇಥಿಯ ರಣತಂತ್ರದ ಬಗ್ಗೆ ಭಾರೀ ಭರವಸೆ ಇಟ್ಟುಕೊಂಡಿದ್ದಾರೆ.  ಜೊತೆಗೆ ಪ್ರಶಾಂತ್ ರಂತೆ ರಜಥ್ ಪ್ರಚಾರ ಪ್ರಿಯರಲ್ಲ ಎಂದೂ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News