ಹಿಝ್ಬುಲ್ಲಾ ವಿರುದ್ಧ ಕುವೈಟ್‌ನ ಕ್ರಮ ಸಾಲದು: ಕುವೈಟ್ ಸ್ವದೇಶಿಗಳ ಅಭಿಪ್ರಾಯ!
ಕುವೈಟ್ ಸಿಟಿ, ಎಪ್ರಿಲ್ 24: ಕುವೈಟ್ ಸಹಿತ ದೇಶಗಳು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿರುವ ಹಿಝ್ಬುಲ್ಲಾವನ್ನು ಎದುರಿಸಲು ಕುವೈಟ್ ಸರಕಾರ ಕೈಗೊಂಡ ಕ್ರಮ ಸಾಲದೆಂದು ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ ಶೇ.82ರಷ್ಟು ಮಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಿಝ್ಬುಲ್ಲಾ ಬೆಂಬಲದಲ್ಲಿ ಕುವೈಟ್‌ನಲ್ಲಿ ಅರಾಜಕತೆಗೆ ಯತ್ನ ನಡೆದಿರುವ ಹಿನ್ನೆಲೆಯಲಿ ಅಲ್‌ಕಬಸ್ ಪತ್ರಿಕೆಯ ಆನ್‌ಲೈನ್ ಪೋರ್ಟಲ್ ಸಂಘಟನೆಯ ಕುರಿತು ಸ್ವದೇಶಿಗಳ ನಡುವೆ ಸಮೀಕ್ಷೆ ನಡೆಸಿತ್ತು. ಸರ್ವೇಯಲ್ಲಿ ಭಾಗವಹಿಸಿದ್ದ 536 ಸ್ವದೇಶಿಗಳಲ್ಲಿ 437 ಮಂದಿ ಹಿಝ್ಬುಲ್ಲಾ ವಿರುದ್ಧ ಸರಕಾರ ಕೈಗೊಂಡ ಕ್ರಮ ಅಪರ್ಯಾಪ್ತವಾಗಿದೆ. ಇದು ಸಾಲದು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಕೇವಲ 99 ಮಂದಿ ಹಿಝ್ಬುಲ್ಲಾದ ಕುರಿತು ಸರಕಾರದ ಕ್ರಮ ಇಷ್ಟು ಸಾಕು ಎಂದಿದ್ದಾರೆಂದು ವರದಿಗಳು ತಿಳಿಸಿವೆ. ಇತರ ದೇಶಗಳು ಹಿಝ್ಬುಲ್ಲಾವನ್ನು ಭಯೋತ್ಪಾದಕ ಸಂಘಟನೆಯ ಪಟ್ಟಿಗೆ ಸೇರಿಸಿದ ಎರಡು ತಿಂಗಳ ಬಳಿಕ ಕುವೈಟ್ ಭಯೋತ್ಪಾದಕ ಸಂಘಟನೆಯ ಪಟ್ಟಿಗೆ ಸೇರಿಸಿತ್ತು.
ಹಿಝ್ಬುಲ್ಲಾ ಮತ್ತುಇರಾನ್‌ನ ಬೆಂಬಲದಿಂದ ಕುವೈಟ್‌ನಲ್ಲಿ ಬೇಹುಗಾರಿಕೆ ಮತ್ತು ಸ್ಫೋಟ ನಡೆಸುವ ಪ್ರಯತ್ನ ನಡೆಸಿದ್ದಾರೆಂದು ಕೆಲವರನ್ನು ಬಂಧಿಸಲಾದ ಹಿನ್ನೆಲೆಯಲ್ಲಿ ಈ ಸಮೀಕ್ಷೆಯನ್ನು ನಡೆಸಲಾಗಿತ್ತು. ಘಟನೆಯ ಆರೋಪಿಗಳಲ್ಲಿ ಇಬ್ಬರಿಗೆ ಮಾತ್ರ ಕುವೈಟ್‌ಕೋರ್ಟು ಗಲ್ಲು ಶಿಕ್ಷೆ ವಿಧಿಸಿದೆ,.ಇದು ಸರಿಅಲ್ಲ ಎಲ್ಲ ಆರೋಪಿಗಳಿಗೂ ಗರಿಷ್ಠ ಶಿಕ್ಷೆಯಾಗಬೇಕೆಂದು ಸಮೀಕ್ಷೆಯಲ್ಲಿ ಭಾಗವಹಿಸಿದ್ದವರಲ್ಲಿ ಹೆಚ್ಚಿನವರು ಅಭಿಮತ ವ್ಯಕ್ತಪಡಿಸಿದ್ದಾರೆಂದು ವರದಿಗಳು ತಿಳಿಸಿವೆ.