×
Ad

ಅಮೆರಿಕದಲ್ಲಿ ಗುಂಡುಹಾರಾಟ: 14 ಮಂದಿ ಮೃತ್ಯು!

Update: 2016-04-24 12:50 IST

ವಾಷಿಂಗ್ಟನ್, ಎಪ್ರಿಲ್ 24: ಎರಡು ಕಡೆಯಲ್ಲಿ ನಡೆದ ಗುಂಡು ಹಾರಾಟದಲ್ಲಿ 14 ಮಂದಿ ಅಮೆರಿಕದಲ್ಲಿ ಹತ್ಯೆಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಅಮೆರಿಕದ ಓಹಿಯೊದಲ್ಲಿ ನಡೆದ ಗುಂಡುಹಾರಾಟದಲ್ಲಿ ಒಂದು ಮಗು ಮತ್ತು ಕುಟುಂಬದ ಎಂಟು ಮಂದಿ ಮೃತರಾಗಿದ್ದಾರೆ. ಜಾರ್ಜಿಯದಲ್ಲಿ ಗನ್‌ಮ್ಯಾನ್ ಗುಂಡು ಹಾರಿಸಿದ ಪರಿಣಾಮ ಆರು ಮಂದಿ ಕೊಲ್ಲಲ್ಪಟ್ಟಿದ್ದಾರೆ. ಇದರಲ್ಲಿ ಎರಡು ಶಿಶುಗಳು ಮತ್ತು ಮೂರುವರ್ಷವಯಸ್ಸಿನ ಒಂದು ಮಗು ಆಶ್ಚರ್ಯಕರವಾಗಿ ಪಾರಾಗಿದೆ ಎಂದು ವರದಿಗಳು ತಿಳಿಸಿವೆ. ಕೊಲ್ಲಲ್ಪಟ್ಟವರಲ್ಲಿ ಹೆಚ್ಚಿನವರು ಗುಂಡುಹಾರಿಸಲಾದ ಸಂದರ್ಭದಲ್ಲಿ ನಿದ್ರೆಯಲ್ಲಿದ್ದರೆನ್ನಲಾಗಿದೆ. ಘಟನೆಗೆ ಸಂಬಂಧಿಸಿ ಈವರೆಗೂ ಯಾರನ್ನೂ ಬಂಧಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಅಮೆರಿಕದಲ್ಲಿ ಪ್ರತಿವರ್ಷ 30,000 ಮಂದಿ ಕೊಲ್ಲಲ್ಪಡುತ್ತಾರೆ ಎಂದು ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News