×
Ad

ಕ್ರಿಕೆಟ್ ಕೋಚ್ ನೇಮಕ ವ್ಯರ್ಥ: ಪಾಕ್ ಮಾಜಿ ಸ್ಪಿನ್ನರ್ ಅಬ್ದುಲ್ ಕಾದಿರ್

Update: 2016-04-24 16:19 IST

ಕರಾಚಿ, ಎಪ್ರಿಲ್ 24; ಪಾಕಿಸ್ತಾನದ ಪ್ರಖ್ಯಾತ ಲೆಗ್‌ಸ್ಪಿನ್ನರ್ ಅಬ್ದುಲ್ ಕಾದಿರ್ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಯಾವುದೇ ಮುಖ್ಯ ಕೋಚ್ ನೇಮಿಸುವ ಕುರಿತು ಟೀಕಿಸಿದ್ದಾರೆ.ಎಲ್ಲಕ್ರಿಕೆಟ್ ಆಡುವ ರಾಷ್ಟ್ರಗಳಿಗೆ ಕೋಚ್ ಇಟ್ಟುಕೊಳ್ಳಬೇಕೆಂದು ಹೇಳುವ ಐಸಿಸಿಯ ವಿಚಾರ ತಪ್ಪು ಆಗಿದೆಯೆಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಾದಿರ್ ಹೇಳಿಕೆ ನೀಡಿ"ಕೋಚ್ ಇಟ್ಟುಕೊಳ್ಳುವುದು ಹಣ ಹಾಳು ಮಾಡುವುದೂ ಎರಡೂ ಒಂದೇ. ಕ್ರಿಕೆಟ್‌ನಲ್ಲಿ ಕೋಚ್‌ನ ಯಾವುದೇ ಅಗತ್ಯವಿಲ್ಲ. ನಾಯಕನೇ ಅದನ್ನು ಮಾಡುತ್ತಾನೆ ಮತ್ತು ಪ್ರತಿಯೊಂದು ವಿಷಯದಲ್ಲಿ ಆಟಗಾರರನ್ನು ಪ್ರೇರೇಪಿಸುವ ಮುಖ್ಯಸ್ಥನಾಗಿರುತ್ತಾನೆ ಎಂದು ಅವರು ಹೇಳಿರುವುದಾಗಿ ವರದಿಯಾಗಿದೆ.

ಅವರು ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ಗೆ ಸಲಹೆ ನೀಡಿದ್ದು ವಕಾರ್ ಯೂನಿಸ್‌ರ ಬದಲಾಗಿ ಹೊಸ ಕೋಚ್ ನೇಮಿಸಲಿಕ್ಕಾಗಿ ಹಣ ಹಾಳು ಮಾಡಬಾರದು ಎಂದೂ ಸಲಹೆ ನೀಡಿದ್ದಾರೆ. ಯೂನಿಸ್ ಖಾನ್ ಏಶಿಯಾ ಕಪ್ ಮತ್ತು ವಿಶ್ವ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಪಾಕಿಸ್ತಾನ ತಂಡದ ಕೆಟ್ಟ ಪ್ರದರ್ಶನದ ನಂತರ ರಾಜೀನಾಮೆ ನೀಡಿದ್ದಾರೆ. "ನನಗೆ ಹೇಳುತ್ತೀರಾ? ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವ ಕ್ರಿಕೆಟರ್‌ಗೆ ಕೋಚಿಂಗ್ ಅಗತ್ಯ ಇದೆಯಾ. ಇನ್ನು ಕ್ರಿಕೆಟ್‌ನಲ್ಲಿ ಆಟಗಾರರಿಗೆ ಪ್ರೇರಣೆ ನೀಡಲು ಯೋಜನೆ ರೂಪಿಸಲು ನಾಯಕನೇ ಸರಿಯಾದ ವ್ಯಕ್ತಿ" ಎಂದು ಕಾದಿರ್ ಗುಡುಗಿದ್ದಾರೆ. " ಪಿಸಿಬಿ ಕೋಚ್‌ಗೆ ಖರ್ಚು ಮಾಡುವ ಹಣವನ್ನು ತನ್ನ ಸ್ಥಳೀಯ ಕ್ರಿಕೆಟ್ ಅಭಿವೃದ್ಧಿಗೆ ಮತ್ತು ಸ್ಥಳೀಯ ಕ್ರಿಕೆಟರ್‌ಗಳ ಪ್ರಯೋಜನಕ್ಕೆ ಬಳಸಲಿ" ಎಂದೂ ಅವರು ಸಲಹೆ ನೀಡಿದ್ದಾರೆ ಎಂದು ವರೆದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News