ಟ್ರಂಪ್ ಸಭೆಗೆ ಬಾಂಬ್ ಬೆದರಿಕೆ: ಬಂಧನ
Update: 2016-04-24 19:02 IST
ವಾಶಿಂಗ್ಟನ್, ಎ. 24: ಕನೆಕ್ಟಿಕಟ್ ರಾಜ್ಯದಲ್ಲಿ ನಡೆದ ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಆಕಾಂಕ್ಷಿ ಡೊನಾಲ್ಡ್ ಟ್ರಂಪ್‌ರ ಚುನಾವಣಾ ಪ್ರಚಾರ ಸಭೆಗೆ ಬಾಂಬ್ ಹಾಕುವ ಬೆದರಿಕೆ ಹಾಕಿದ 20 ವರ್ಷದ ಯುವಕನೊಬ್ಬನನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.
‘‘ಟ್ರಂಪ್ ಸಭೆಗೆ ಯಾರಾದರೂ ಬಾಂಬ್ ಹಾಕುತ್ತಾರಾ? ಅಥವಾ ನಾನೆ ಹಾಕಬೇಕಾಗುತ್ತದಾ?’’ ಎಂಬುದಾಗಿ ಆ ವ್ಯಕ್ತಿ ಟ್ವಿಟರ್‌ನಲ್ಲಿ ಸಂದೇಶವೊಂದನ್ನು ಹಾಕಿದ್ದನು ಎಂದು ಪೊಲೀಸರು ಹೇಳಿದ್ದಾರೆ.