ಭ್ರಷ್ಟಾಚಾರ ನಿಯಂತ್ರಣಕ್ಕೆ 'ಸೋನಿಯಾ ಮಾದರಿ' ಪಾಲಿಸಲು ಕರೆಕೊಟ್ಟ ಕೇಂದ್ರ ಸಚಿವೆ ಮೇನಕಾ !
ಲಕ್ನೌ :ಶಿಕ್ಷಣ ಇಲಾಖೆಯಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸೋನಿಯಾ ಮಾದರಿಯನ್ನು ಅನುಸರಿಸುವಂತೆ ಕೇಂದ್ರಮಹಿಳಾ ಮತ್ತು ಮಕಳ್ಕ ಕಲ್ಯಾಣ ಸಚಿವೆ ಮೇನಕಾ ಗಾಂಧಿ ಅಧಿಕಾರಿಗಳಿಗೆ ಕರೆ ನೀಡಿದ ಘಟನೆಸಚಿವೆಯ ಕ್ಷೇತ್ರ ಪಿಲಿಭಿಟ್ ನಲ್ಲಿ ನಡೆದ ಜಿಲ್ಲಾ ವಿಚಕ್ಷಣಾ ದಳದ ಸಭೆಯ ಸಂದರ್ಭ ನಡೆಯಿತು.
ಕೆಲವು ಕಡೆಗಳಲ್ಲಿ ಪ್ರಾಥಮಿಕ ತರಗತಿಗಳನ್ನು ನಡೆಸಲು ಅನಮತಿ ಪಡೆದ ಶಾಲೆಗಳು ಹೈಸ್ಕೂಲ್ ತರಗತಿಗಳನ್ನು ನಡೆಸುತ್ತಿವೆಯೆಂದು ಸಭೆಯಲ್ಲಿ ದೂರು ಕೇಳಿ ಬಂದಾಗ, ಲಂಚ ಪಡೆದು ಶಾಲೆಗಳಿಗೆ ಅನುಮತಿ ನೀಡಿದ ಅಧಿಕಾರಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಚಿವೆಪ್ರಾಥಮಿಕ ಶಿಕ್ಷಾ ಅಧಿಕಾರಿ ಅಂಬ್ರೀಶ್ ಕುಮಾರ್ ಅವರಿಗೆ ಆದೇಶಿಸಿದರು. ಆದರೆ ಕುಮಾರ್ ತನಗೆ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಅಧಿಕಾರವಿಲ್ಲವೆಂದು ಹೇಳಿದಾಗ ಸಚಿವೆ ಅವರಿಗೆ ಸೋನಿಯಾ ಕಥೆಯನ್ನು ಹೇಳಿದರು.
ಮೇನಕಾ ಪ್ರಕಾರ ಸೋನಿಯಾರವರ ಸಂಬಂಧಿಯೊಬ್ಬರು ಒಮ್ಮೆ ಅಂಗಡಿಯೊಂದನ್ನು ತೆರೆದು ಎಲ್ಲರ ಬಳಿಯೂ ತಾನು ಸೋನಿಯಾ ಸಂಬಂಧಿಯೆಂದು ಹೇಳಲು ಶುರುವಿಟ್ಟುಕೊಂಡಿದ್ದರಂತೆ. ತನ್ನ ಹೆಸರಿನ ದುರ್ಬಳಕೆ ತಡೆಯಲು ಸೋನಿಯಾ ದಿನಪತ್ರಿಕೆಗಳಲ್ಲಿ ಜಾಹೀರಾತು ನೀಡಿ ಆ ಅಂಗಡಿಗೆ ಹೋಗದಂತೆ ಜನರಲ್ಲಿ ಹೇಳಿದ್ದರು ಎಂದು ಮೇನಕಾ ಹೇಳಿದರು. ‘‘ನೀವು ಕೂಡ ಇಂತಹುದೇ ಕ್ರಮ ಕೈಗೊಳ್ಳಬೇಕೆಂದು ನಾನು ಬಯಸುತ್ತೇನೆ. ದಿನಪತ್ರಿಕೆಗಳಲ್ಲಿ ಜಾಹೀರಾತುನೀಡಿ. ನಿಮ್ಮ ಕಚೇರಿಯಲ್ಲಿ ನೋಟಿಸ್ಅಂಟಿಸಿ. ತಮ್ಮ ಶಾಲೆಗಳಿಗೆ ಮಾನ್ಯತೆ ಪಡೆಯಬಯಸುವವರು ನಿಮ್ಮ ಬಳಿಯೇ ಬರುತ್ತಾರೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಲಾಗವುದು,’’ಎಂದು ಹೇಳಿದರು.