×
Ad

ಪ್ರೇಮಿಸಿ ವಂಚಿಸಿದ ಯುವಕನ ಮನೆಗೆ ಬ್ಯಾಂಡ್ ಓಲಗಗಳೊಂದಿಗೆ ಬಂದ ಮಹಿಳೆ!

Update: 2016-04-25 11:24 IST

ಗೊರಕ್‌ಪುರ, ಎಪ್ರಿಲ್ 25: ಪ್ರೇಮಿಸಿ ವಂಚನೆಗೊಳಗಾದ ಯುವತಿಯರು ಅಸಹಾಕರಾಗಿ ಕೂರುವುದು ಹೊಸದೇನಲ್ಲ. ಆದರೆ ಗೊರಕ್‌ಪುರದ ಸುಧಾ ಚೌಧರಿ ಎಂಬ ಮಹಿಳೆ ತನ್ನ ಪ್ರಿಯತಮ ಮನೆಗೆ ಬ್ಯಾಂಡ್ ಓಲಗಗಳೊಂದಿಗೆ ದಿಬ್ಬಣವನ್ನು ಕರೆತಂದು ಅಪೂರ್ವ ಸಾಹಸವನ್ನು ಮೆರೆದಿದ್ದಾಳೆ. ಮಹಿಳೆ ಹೇಳುವ ಪ್ರಕಾರ ಯುವಕನೊಂದಿಗೆ ಅವಳ ಮದುವೆ ಮೊದಲೇ ಆಗಿದೆ. ಅವರಿಗೆ ಎಂಟು ವರ್ಷದ ಗಂಡು ಮಗ ಇದ್ದಾನೆ.ಹಾಗಿದ್ದರೂ ಆರೋಪಿ ಬೇರೊಬ್ಬಳೊಂದಿಗೆ ಮದುವೆ ಆಗಲು ಹೊರಟಿದ್ದಾನೆ.

ಪೊಲೀಸರಿಗೆ ದೂರು ನೀಡಿದ್ದರೂ ಅವರು ಯಾವುದೇ ಕ್ರಮ ಕೈಗೊಳ್ಳದ್ದರಿಂದ ತಾನೇ ದಿಬ್ಬಣವನ್ನು ಕರೆದುಕೊಂಡು ಬಂದೆ ಎಂದು ಸುಧಾ ಚೌಧರಿ ಹೇಳಿರುವುದಾಗಿ ವರದಿಯಾಗಿದೆ. ಮಹಿಳೆ ಅಂಗನವಾಡಿ ಸಹಾಯಕಿ ಆಗಿದ್ದು ಎಂಟು ವರ್ಷದ ಮೊದಲು ಅವಳು ಮನೀಷ್ ಚೌಧರಿಯನ್ನು ಭೇಟಿಯಾಗಿದ್ದಳು. ಪ್ರೀತಿ ಆಗಿ ಮಹಿಳೆ ಗರ್ಭಿಣಿಯಾಗಿದ್ದಳು. ಗಂಡು ಮಗುವಿಗೆ ಜನ್ಮ ನೀಡಿದ್ದಳು. ತನಗೆ ಮಗುವಾದ ಮೇಲೆ ತಮ್ಮಿಬ್ಬರ ಮದುವೆ ದೇವಸ್ಥಾನದಲ್ಲಿ ಆಗಿದೆ ಎಂದು ಸುಧಾ ಹೇಳುತ್ತಿದ್ದಾಳೆ. ಆನಂತರ ಅವರಿಬ್ಬರೂ ದಿಲ್ಲಿಯ ಶಹರದಲ್ಲಿ ಜೊತೆಯಾಗಿ ವಾಸಿಸುತ್ತಿದ್ದರು. ಆದರೆ ಮಹಿಳೆ ತನ್ನ ಕೆಲಸದ ನಿಮಿತ್ತ ವಾಪಸು ಖುಶಿನಗರಕ್ಕೆ ಬಂದಿದ್ದಳು. ಯುವಕ ದಿಲ್ಲಿಯಲ್ಲಿಯೇ ಉಳಿದುಕೊಂಡಿದ್ದ. ರಜೆಯ ವೇಳೆಯಲ್ಲಿ ಮನೀಷ್ ಮಹಿಳೆಯ ಮನೆಗೆ ಬಂದು ಹೋಗುತ್ತಿದ್ದು ಕೆಲವು ಸಮಯದ ನಂತರ ಮನೀಷ್ ಇನ್ನೊಂದು ಮದುವೆ ಸಿದ್ಧತೆ ನಡೆಸುತ್ತಿದ್ದಾನೆ ಎಂದು ಸುಧಾಳಿಗೆ ತಿಳಿದು ಬಂದಿತ್ತು.

ಆದ್ದರಿಂದ ಅವಳು ದಿಬ್ಬಣದೊಂದಿಗೆ ಮನೀಷ್‌ನ ಮನೆಗೆ ಬಂದಿದ್ದಳು.ಆದರೆ ದಿಬ್ಬಣ ತಲುಪುವಷ್ಟರಲ್ಲಿ ಯುವಕ ತನ್ನ ಕುಟುಂಬವನ್ನು ಕರೆದುಕೊಂಡು ಪರಾರಿಯಾಗಿದ್ದಾನೆ. ಈಗ ಪೊಲೀಸರು ಮನೀಷ್‌ನನ್ನು ಹುಡುಕುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News