ಶ್ರೀಲಂಕಾ ಕ್ರಿಕೆಟಿಗ ಕೌಶಲ ಸಿಲ್ವಾರಿಗೆ ಅಭ್ಯಾಸ ಪಂದ್ಯದಲ್ಲಿ ತಲೆಗೆ ಚೆಂಡು ಬಿದ್ದು ಗಾಯ: ಆಸ್ಪತ್ರೆಗೆ ದಾಖಲು
ಶ್ರೀಲಂಕಾ, ಎಪ್ರಿಲ್ 25: ಅಭ್ಯಾಸ ಪಂದ್ಯವೊಂದರಲ್ಲಿ ಶ್ರೀಲಂಕಾದ ಕ್ರಿಕೆಟಿಗ ಕೌಶಲ್ ಸಿಲ್ವಾ ಗಾಯಗೊಂಡಿದ್ದಾರೆ. ಅವರನ್ನು ಕೊಲೊಂಬೊದ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ವರದಿಯಾಗಿದೆ. ಸುದ್ದಿಸಂಸ್ಥೆಗಳ ವರದಿಗಳ ಪ್ರಕಾರ ಪಲ್ಲೆಕಲ್‌ನಲ್ಲಿ ಅಭ್ಯಾಸ ಪಂದ್ಯದಲ್ಲಿ ಶಾರ್ಟ್‌ಲೆಗ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ವೇಳೆ ಚೆಂಡು ಬಡಿದಿತ್ತು.
ಇಎಸ್‌ಪಿಎನ್ ಕ್ರಿಕ್ ಇನ್ಫೋ ಪ್ರಕಾರ ವೈದ್ಯರು ಸಿಟಿ ಸ್ಕಾನ್ ಮಾಡಿದ್ದು ಅವರು ಅಪಾಯದಿಂದ ಹೊರಬಂದಿದ್ದಾರೆ ಎಂದು ವರದಿಯಾಗಿದೆ. ಆದರೆ ಅವರ ಆರೋಗ್ಯ ಪರಿಸ್ಥಿತಿ ಮೇಲೆ ನಿಗಾ ಇರಿಸಲಾಗಿದೆ ಎಂದು ಹೇಳಲಾಗುತ್ತಿದೆ,. ಶ್ರೀಲಂಕಾ ತಂಡದ ಮ್ಯಾನೇಜರ್ ಚಾರ್ಥಿಸೇನಾನಾಯಕರ ಪ್ರಕಾರ ಶಾರ್ಟ್‌ಲೆಗ್ ಫೀಲ್ಡಿಂಗ್ ಮಾಡುತ್ತಿದ್ದಾಗ ದಿನೇಶ್ ಚಾಂಡಿಮಲ್‌ರ ಸ್ವೀಪ್ ಹೊಡೆತದಿಂದ ಕೌಶಲರ ತಲೆಗೆ ಗಾಯವಾಗಿದೆ.ಆದರೆ ಕೌಶಲ್ ಹೆಲ್ಮೆಟ್ ಧರಿಸಿದ್ದರು. ಸ್ಥಳೀಯ ಆಸ್ಪತ್ರೆಗೆ ಸೇರಿಸಲಾದರೂ ಅಲ್ಲಿಂದ ಕೊಲೊಂಬೊಆಸ್ಪತ್ರೆಗೆ ಕರೆದೊಯ್ಯಲು ಶಿಫಾರಸು ಮಾಡಲಾಯಿತು ಎಂದು ತಿಳಿಸಿದ್ದಾರೆ.
ಆಸ್ಟ್ರೇಲಿಯಾದ ಕ್ರಿಕೆಟಿಗ 25ವರ್ಷದ ಫಿಲ್‌ಹ್ಯೂಸ್ 2014 ನವಂಬರ್ 27ರಂದು ತಲೆಗೆ ಪೆಟ್ಟಾಗಿದ್ದು ನಂತರ ಅವರು ಮೃತರಾಗಿದ್ದು.ಆನಂತರ ಕ್ರಿಕೆಟಿಗರಿಗೆ ವಿಶೇಷ ವಿನ್ಯಾಸದ ಹೆಲ್ಮೆಟ್ ತಯಾರಿಸಲಾಗಿದೆ ಎಂದು ವರದಿಯಾಗಿದೆ.