ಇರಾನಿ ವಿರುದ್ಧದ ಹಕ್ಕು ಚ್ಯುತಿ ಸೂಚನೆ ಅಂಗೀಕರಿಸಿದ ಸಭಾಪತಿ
Update: 2016-04-26 23:04 IST
ಹೊಸದಿಲ್ಲಿ,ಎ.26: ಸ್ಮತಿ ಇರಾನಿ ವಿರುದ್ಧ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಅವರು ಸಲ್ಲಿಸಿರುವ ಹಕ್ಕು ಚ್ಯುತಿ ಸೂಚನೆಯನ್ನು ರಾಜ್ಯಸಭೆಯ ಸಭಾಪತಿಗಳು ಅಂಗೀಕರಿಸಿ ಜೆಎನ್‌ಯು ಕುರಿತು ಹಕ್ಕು ಸಮಿತಿಗೆ ಕಳುಹಿಸಿದ್ದು,ಇದರೊಂದಿಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆಗೆ ತೊಂದರೆ ಎದುರಾಗಿದೆ.
ಫೆಬ್ರುವರಿಯಲ್ಲಿ ಮುಂಗಡಪತ್ರ ಅಧಿವೇಶನದ ಸಂದರ್ಭ ಕಾಂಗ್ರೆಸ್ ಮತ್ತು ಸಿಪಿಎಂ ಇರಾನಿ ವಿರುದ್ಧ ಹಕ್ಕು ಚ್ಯುತಿ ಸೂಚನೆಗಳನ್ನು ಸಲ್ಲಿಸಿದ್ದವು.
ಜೆಎನ್‌ಯು ಮತ್ತು ಹೈದರಾಬಾದ್ ಕೇಂದ್ರೀಯ ವಿವಿಗಳಲ್ಲಿನ ಸ್ಥಿತಿಯ ಕುರಿತು ಚರ್ಚೆಯಲ್ಲಿ ಮಧ್ಯಪ್ರವೇಶಿಸಿ ಮಾತನಾಡಿದ್ದ ಇರಾನಿ ಸುಳ್ಳು,ಕಲ್ಪಿತ,ದಾರಿ ತಪ್ಪಿಸುವ ಮತ್ತು ಅನಧಿಕೃತ ಹೇಳಿಕೆಗಳನ್ನು ನೀಡಿದ್ದರು ಎಂದು ಹಕ್ಕು ಚ್ಯುತಿ ಸೂಚನೆಯಲ್ಲಿ ಆರೋಪಿಸಲಾಗಿದೆ.