ಸಮುದ್ರ, ದಡದಲ್ಲಿ ಓಡುವ ಬೈಕ್‌ನೊಂದಿಗೆ ಶಾರ್ಜಾ ಪೊಲೀಸರು!
Update: 2016-04-27 11:06 IST
ಶಾರ್, ಎಪ್ರಿಲ್ 27: ರಕ್ಷಣಾ ಚಟುವಟಿಕೆಗಳಿಗೆ ಹೆಚ್ಚಿನ ಶಕ್ತಿ ತಂದು ಕೊಡಲಿಕ್ಕಾಗಿ ಶಾರ್ಜ ಪೊಲೀಸರು ಸಮುದ್ರದಲ್ಲಿ ಮತ್ತು ದಡದಲ್ಲಿ ಚಲಿಸುವ ಬೈಕ್‌ಗಳನ್ನು ಹೊಂದಿದ್ದಾರೆ ಎಂದು ವರದಿಯಾಗಿದೆ. ಕರಾವಳಿ ಪ್ರದೇಶದಲ್ಲಿ ಇದನ್ನು ಉಪಯೋಗಿಸಲಾಗುವುದು.
ಶಾರ್ಜ ಪೊಲೀಸ್ ಆ್ಯಂಬುಲೆನ್ಸ್ ಆ್ಯಂಡ್ ರೆಸ್ಕ್ಯೂ ವಿಭಾಗದ ಮುಖ್ಯಸ್ಥ ಲೆಫ್ಟ್‌ನೆಂಟ್ ಕರ್ನಲ್ ಝಾಯಿದ್ ಅಲ್‌ಜಲ್ಲಾಫ್ ಈ ವಿಷಯವನ್ನು ತಿಳಿಸಿದ್ದು ಕರಾವಳಿ ಪ್ರದೇಶಗಳಲ್ಲಿ ಅವಘಡ ನಿತ್ಯದ ಘಟನೆಯಾಗುತ್ತಿದೆ. ಹಲವಾರು ಮಂದಿಯ ಜೀವಹಾನಿಯಾಗಿದೆ. ಇವನ್ನೆಲ್ಲ ಪರಿಗಣಿಸಿ ಬೈಕ್‌ಗಳನ್ನು ಕರಾವಳಿ ಪ್ರದೇಶದಲ್ಲಿ ಬಳಸಲು ಉದ್ದೇಶಿಸಲಾಗಿದೆ ಎಂದು ಅವರು ಹೇಳಿರುವುದಾಗಿ ವರದಿಯಾಗಿದೆ.