×
Ad

ಬಾಲಿವುಡ್ ನಿರ್ದೇಶಕ ಕಬೀರ್ ಖಾನ್‌ಗೆ ಕರಾಚಿಯಲ್ಲಿ ಚಪ್ಪಲಿ ತೋರಿಸಿ ಘೋಷಣೆ ಕೂಗಿದ ಯುವಕರು!

Update: 2016-04-27 15:40 IST

ಕರಾಚಿ, ಎಪ್ರಿಲ್ 27: ಸೂಪರ್ ಹಿಟ್ ಸಿನೆಮಾ ಬಜರಂಗಿ ಭಾಯಿ ಜಾನ್ ನಿರ್ದೇಶಕ ಕಬೀರ್ ಖಾನ್‌ರಿಗೆ ಪಾಕಿಸ್ತಾನದಲ್ಲಿ ಭಾರೀ ವಿರೋಧ ಎದರಾಗಿರುವುದಾಗಿ ವರದಿಯಾಗಿದೆ. ಒಂದು ಸೆಮಿನಾರ್‌ನಲ್ಲಿ ಭಾಗವಹಿಸುವುದಕ್ಕಾಗಿ ಅವರು ಪಾಕಿಸ್ತಾನಕ್ಕೆ ಹೋಗಿದ್ದರು. ಕರಾಚಿಯ ಏರ್‌ಪೋರ್ಟ್‌ನಲ್ಲಿ ಅವರಿಗೆ ಚಪ್ಪಲಿ ತೋರಿಸಲಾಗಿದೆ. ಕಬೀರ್ ಖಾನ್ ಗುಂಪೊಂದು ಅವರು ಲಾಹೋರ್‌ಗೆ ತೆರಳಲಿಕ್ಕಾಗಿ ಕರಾಚಿ ಏರ್‌ಪೋರ್ಟ್ ತಲುಪಿದಾಗ ಟಾರ್ಗೆಟ್ ಮಾಡಿತು. ಲಾಹೋರ್‌ನಲ್ಲಿ ಅವರು ಒಂದು ಸೆಮಿನಾರ್‌ನಲ್ಲಿ ಭಾಗವಹಿಸಬೇಕಾಗಿತ್ತು. ಕಬೀರ್‌ಖಾನ್‌ರಿಗೆ ಚಪ್ಪಲಿ ತೋರಿಸಲಾಯಿತು ಮತ್ತು ಅವರ ವಿರುದ್ಧ ಘೋಷಣೆ ಕೂಗಲಾಯಿತೆಂದು ವರದಿಗಳು ತಿಳಿಸಿವೆ.

 ಪಾಕಿಸ್ತಾನಿ ಪತ್ರಿಕೆ ಡಾನ್ ಪ್ರಕಾರ ಕೆಲವು ಯುವಕರ ಗುಂಪು ಕಬೀರ್ ಖಾನ್‌ರ ಮೇಲೆ ಅವರ ಸಿನೆಮಾಕ್ಕಾಗಿ ಕೋಪಗೊಂಡಿದ್ದರು. ಕಬೀರ್ ಖಾನ್ ಫ್ಯಾಂಟಮ್ ಸಿನೆಮಾದಲ್ಲಿ ಪಾಕಿಸ್ತಾನ ಭಯೋತ್ಪಾದಕರ ಅಡ್ಡೆ ಎಂದು ತೋರಿಸಿದ್ದಾರೆ ಎನ್ನುತ್ತಾ ಯುವಕರ ಗುಂಪು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಪತ್ರಿಕೆ ಹೇಳಿದೆ. ಪ್ರತಿಭಟನಾ ಕಾರರು ಸೈಫ್ ಅಲಿಖಾನ್‌ರ ಮನೆಗೆ ನುಗ್ಗಿ ಹೊಡೆಯುತ್ತೇನೆ ಎಂಬ ಡೈಲಾಗ್‌ನಿಂದ ಬಹಳ ಕುಪಿತಗೊಂಡಿದ್ದರು. ಕಬೀರ್‌ಖಾನ್ ಪ್ರತಿಭಟನಾಕಾರರ ವಿರೋಧದ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಕಬೀರ್ ಖಾನ್ ಬಾಲಿವುಡ್‌ನ ಪ್ರಸಿದ್ಧ ನಿರ್ದೇಶಕರಲ್ಲೊಬ್ಬರು. ಅವರ ಸಿನೆಮಾ ಕತೆ ಪಾಕಿಸ್ತಾನದ ಸುತ್ತಮುತ್ತ ಹರಿದಾಡುತ್ತವೆ. 2012ರಲ್ಲಿ ಪಾಕಿಸ್ತಾನ ಆಧಾರಿತ ಏಕ್ ಥಾ ಟೈಗರ್ ಸಿನೆಮಾ ಮಾಡಿದ್ದರು. ಕಳೆದ ವರ್ಷ ಭಜರಂಗಿ ಭಾಯಿಜಾನ್ ಸಿನೆಮಾ ಮಾಡಿದ್ದರು. ಫ್ಯಾಂಟಮ್ ಸಿನೆಮಾದಲ್ಲಿ ಭಾರತದ ಏಜೆಂಟ್ ಮುಂಬೈ ದಾಳಿಯ ಮುಖ್ಯ ಆರೋಪಿ ಹಾಫಿರ್ ಸಯೀದ್‌ರನ್ನು ಪಾಕಿಸ್ತಾನಕ್ಕೆ ನುಗ್ಗಿ ಬಂಧಿಸಿದಂತೆ ತೋರಿಸಲಾಗಿತ್ತು. ಈಗ ಕೋಪಗೊಂಡಿರುವ ಹಾಫಿರ್ ಸಯೀದ್‌ರ ಬೆಂಬಲಿಗರು ಅವರ ವಿರೋಧಿಗಳಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News