ತಿರುಚಿದ ವೀಡಿಯೊ ಸಂಬಂಧ ಎಫ್‌ಐಆರ್ ದಾಖಲಾಗಿಲ್ಲ: ಚೌಧರಿ

Update: 2016-04-27 18:21 GMT


ಹೊಸದಿಲ್ಲಿ, ಎ.27: ಜೆಎನ್‌ಯುನಲ್ಲಿ ಫೆ.9ರಂದು ನಡೆದಿದ್ದ ಅಫ್ಝಲ್ ಪರ ವಿವಾದಿತ ಕಾರ್ಯಕ್ರಮದ ‘ತಿರುಚಲಾದ ವೀಡಿಯೊ’ ಕುರಿತು ದಿಲ್ಲಿ ಪೊಲೀಸರು ಎಫ್‌ಐಆರ್ ದಾಖಲಾಗಿಸಿಲ್ಲವೆಂದು ಸರಕಾರವಿಂದು ರಾಜ್ಯಸಭೆಗೆ ತಿಳಿಸಿದೆ.
ದಿಲ್ಲಿ ಪೊಲೀಸರು ವರದಿ ಮಾಡಿರುವಂತೆ, ಈ ಸಂಬಂಧ ಅಧಿಕೃತ ಸಾಕ್ಷಗಳು ಲಭ್ಯವಾಗುವ ಕಾರಣ ಎಫ್‌ಐಆರ್ ದಾಖಲಿಸಲಾಗಿಲ್ಲವೆಂದು ಗೃಹ ಸಹಾಯಕ ಸಚಿವ ಹರಿಭಾಯಿ ಚೌಧರಿ ಲಿಖಿತ ಉತ್ತರವೊಂದರಲ್ಲಿ ಹೇಳಿದರು.
ಜೆಎನ್‌ಯು ಘಟನೆಯ ವೀಡಿಯೊ ತಿರುಚಿದವರ ವಿರುದ್ಧ ದಾಖಲಿಸಲಾದ ಎಫ್‌ಐಆರ್‌ನ ವಿವರವನ್ನು ಎಸ್ಪಿ ಸಂಸದ ನೀರಜ್ ಶೇಖರ್ ಕೋರಿದ್ದರು.
ವಿಧಿ ವಿಜ್ಞಾನವನ್ನು ಪ್ರಯೋಗಾಲಯದ ಕೆಲವು ಫಲಿತಾಂಶಗಳಿಗಾಗಿ ಕಾಯಲಾಗುತ್ತಿದೆ ತನಿಖೆ ಪ್ರಗತಿಯಲ್ಲಿದೆಯೆಂದು ಸಚಿವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾರತ ವಿರೋಧಿ ಘೋಷಣೆ ಕೂಗಿದ್ದರೆನ್ನಲಾದವರು ಮುಖವನ್ನು ಮುಚ್ಚಿಕೊಂಡಿದ್ದರು. ಅವರನ್ನು ಗುರುತಿಸಿ ಬಂಧಿಸಲು ಕೇಂದ್ರೀಯ ಗುಪ್ತಚರ ಸಂಸ್ಥೆಗಳು ಹಾಗೂ ದಿಲ್ಲಿ ಪೊಲೀಸರಿಂದ ಏಕೆ ಸಾಧ್ಯವಾಗಿಲ್ಲವೆಂದೂ ನೀರಜ್ ತಿಳಿದುಕೊಳ್ಳ ಬಯಸಿದರು.
 ಈ ಸಂಬಂಧ ಐಪಿಸಿಯ ವಿವಿಧ ಕಲಮುಗಳನ್ವಯ ಎಫ್‌ಐಆರ್ ಒಂದನ್ನು ವಸಂತ ಕುಂಜ್ ಠಾಣೆಯಲ್ಲಿ ದಾಖಲಿಸಲಾಗಿದೆ. ದಿಲ್ಲಿ ಪೊಲೀಸರ ವಿಶೇಷ ವಿಭಾಗ ಅದರ ತನಿಖೆ ನಡೆಸುತ್ತಿದೆಯೆಂದು ಚೌಧರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News