×
Ad

ಟ್ವೆಂಟಿ-20ಯಲ್ಲಿ 21 ಎಸೆತಗಳಲ್ಲಿ ಶತಕ:ವಿಂಡೀಸ್‌ನ ಥಾಮಸ್ ವಿಶ್ವ ದಾಖಲೆ

Update: 2016-04-28 23:30 IST

ಜಮೈಕಾ, ಎ.28: ಟೊಬಾಗೊ ಕ್ರಿಕೆಟ್ ಅಸೋಸಿಯೇಶನ್‌ನ ಟ್ವೆಂಟಿ-20 ಟೂರ್ನಮೆಂಟ್‌ನಲ್ಲಿ 23 ರ ಹರೆಯದ ಟೊಬಾಗೊ ತಂಡದ ದಾಂಡಿಗ ಇರಾಕ್ ಥಾಮಸ್ ಕೇವಲ 21 ಎಸೆತಗಳಲ್ಲಿ ಶತಕವನ್ನು ಸಿಡಿಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

31 ಎಸೆತಗಳಲ್ಲಿ 15 ಸಿಕ್ಸರ್ ಹಾಗೂ 5 ಬೌಂಡರಿಗಳ ಸಹಿತ ಔಟಾಗದೆ 131 ರನ್ ಬಾರಿಸಿದ ಥಾಮಸ್ ಟೊಬಾಗೊ ತಂಡ 152 ರನ್ ಗುರಿಯನ್ನು ಕೇವಲ 8 ಓವರ್‌ಗಳಲ್ಲಿ ತಲುಪಲು ನೆರವಾಗಿದ್ದಾರೆ.

ನನ್ನ ಚೊಚ್ಚಲ ಟ್ವೆಂಟಿ-20 ಶತಕವನ್ನು ತಲುಪಿದ್ದಕ್ಕೆ ತುಂಬಾ ಸಂತೋಷವಾಗಿದೆ. ನಾನು ಕೆಲವು ಸಮಯದಿಂದ ಕ್ರಿಕೆಟ್ ಆಡುತ್ತಿದ್ದು, ಇದೀಗ ಚುಟುಕು ಮಾದರಿಯ ಪಂದ್ಯದಲ್ಲಿ ಶತಕ ಬಾರಿಸಿದ್ದೇನೆ ಎಂದು ಥಾಮಸ್ ಹೇಳಿದ್ದಾರೆ.

ವೆಸ್ಟ್‌ಇಂಡೀಸ್‌ನ ಕ್ರಿಸ್ ಗೇಲ್ ಐಪಿಎಲ್‌ನಲ್ಲಿ ಪುಣೆ ವಾರಿಯರ್ಸ್‌ ವಿರುದ್ಧ 30 ಎಸೆತಗಳಲ್ಲಿ ಶತಕ ಸಿಡಿಸಿ ಅತ್ಯಂತ ವೇಗದ ಟ್ವೆಂಟಿ-20 ಶತಕವನ್ನು ಬಾರಿಸಿದ್ದರು. ದಕ್ಷಿಣ ಆಫ್ರಿಕದ ಸ್ಫೋಟಕ ದಾಂಡಿಗ ಎಬಿ ಡಿ ವಿಲಿಯರ್ಸ್ 31 ಎಸೆತಗಳಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ವೇಗದ ಶತಕ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News