ಸಲ್ಮಾನ್ ಖಾನ್ ಪರ ಸೌರವ್ ಗಂಗುಲಿ ಬ್ಯಾಟಿಂಗ್
Update: 2016-04-28 23:41 IST
ಕೋಲ್ಕತಾ, ಎ.28: ಮುಂಬರುವ ಒಲಿಂಪಿಕ್ಸ್‌ಗೆ ಭಾರತದ ರಾಯಭಾರಿ ಆಗಿ ಆಯ್ಕೆಯಾಗಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಪರ ಭಾರತದ ಮಾಜಿ ನಾಯಕ ಸೌರವ್ ಗಂಗುಲಿ ಬ್ಯಾಟಿಂಗ್ ಮಾಡಿದ್ದಾರೆ.
ಸಲ್ಮಾನ್ ಖಾನ್ ಆಯ್ಕೆಯ ಬಗ್ಗೆ ದೇಶದಲ್ಲಿ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವ ನಡುವೆಯೇ ತನ್ನ ಅಭಿಪ್ರಾಯವನ್ನು ತಿಳಿಸಿರುವ ಗಂಗುಲಿ, ಸಲ್ಮಾನ್ ಖಾನ್ ಜನಪ್ರಿಯತೆಯನ್ನು ನಾವು ನಿರಾಕರಿಸುವಂತಿಲ್ಲ. ಅವರು ರಿಯೋ ಒಲಿಂಪಿಕ್ಸ್‌ಗೆ ದೂರದೃಷ್ಟಿಯಾಗಲಿದ್ದಾರೆ ಎಂದರು.