ಆರ್ಚರಿ ವಿಶ್ವಕಪ್: ಕ್ವಾರ್ಟರ್ ಫೈನಲ್‌ನಲ್ಲಿ ಎಡವಿದ ದೀಪಿಕಾ
ಶಾಂೈ, ಎ.28: ವಿಶ್ವ ದಾಖಲೆಯನ್ನು ಸರಿಗಟ್ಟಿದ ಒಂದು ದಿನದ ಬಳಿಕ ಭಾರತದ ಬಿಲ್ಗಾರ್ತಿ ದೀಪಿಕಾ ಕುಮಾರಿ ಇಲ್ಲಿ ನಡೆಯುತ್ತಿರುವ ಆರ್ಚರಿ ವಿಶ್ವಕಪ್‌ನ ವೈಯಕ್ತಿಕ ಸ್ಪರ್ಧೆಯಲ್ಲಿ ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ ಎಡವಿದ್ದಾರೆ.
ಅರ್ಹತಾ ಸುತ್ತಿನಲ್ಲಿ 686 ಅಂಕ ಗಳಿಸಿ ವಿಶ್ವ ದಾಖಲೆಯನ್ನು ಸರಿಟ್ಟಿದ ಹಿನ್ನೆಲೆಯಲ್ಲಿ ಮೂರನೆ ಸುತ್ತಿಗೆ ಬೈ ಪಡೆದಿದ್ದ ದೀಪಿಕಾ ಮಹಿಳೆಯರ ರಿಕರ್ವ್ ವೈಯಕ್ತಿಕ ವಿಭಾಗದ ಎರಡು ಪಂದ್ಯಗಳಲ್ಲಿ ಸುಲಭ ಜಯ ಸಾಧಿಸಿ ಉತ್ತಮ ಆರಂಭ ಪಡೆದಿದ್ದರು. ಆದರೆ, ಕ್ವಾರ್ಟರ್ ಫೈನಲ್‌ನಲ್ಲಿ ಡೆನ್ಮಾರ್ಕ್‌ನ ಮಾಜಾ ಜಾಗೆರ್ ವಿರುದ್ಧ 4-6 ಅಂತರದಿಂದ ಶರಣಾಗಿದ್ದಾರೆ.
ಜರ್ಮನಿಯ ವೆರೊನಿಕಾ ವಿರುದ್ಧ 6-0 ಅಂತರದಿಂದ ಜಯ ಸಾಧಿಸಿರುವ ದೀಪಿಕಾ, ಎರಡನೆ ಪಂದ್ಯದಲ್ಲಿ ಚೀನಾದ ಯುಯಾನ್ ವಿರುದ್ಧವೂ 7-1 ಅಂತರದಿಂದ ಜಯ ಸಾಧಿಸಿದ್ದರು.
ಆದರೆ, ದೀಪಿಕಾರಲ್ಲದೆ, ಲಕ್ಷ್ಮಿರಾಣಿ ಹಾಗೂ ಜಯಂತ್ ತಾಲೂಕ್‌ದಾರ್ ಕೂಡ ಕ್ವಾರ್ಟರ್ ಫೈನಲ್‌ನಲ್ಲೇ ಸೋತು ಟೂರ್ನಿಯಿಂದ ಹೊರ ನಡೆದಿದ್ದಾರೆ. ಈ ಮೂವರ ಸೋಲಿನಿಂದಾಗಿ ಟೂರ್ನಿಯಲ್ಲಿ ವೈಯಕ್ತಿಕ ಸ್ಪರ್ಧೆಯಲ್ಲಿ ಭಾರತದ ಅಭಿಯಾನ ಕೊನೆಗೊಂಡಂತಾಗಿದೆ.
ಭಾರತ ತಂಡ ಟೀಮ್ ಸ್ಪರ್ಧೆಗಳು ಹಾಗೂ ಮಿಕ್ಸೆಡ್ ಇವೆಂಟ್ ಸ್ಪರ್ಧೆಗಳಲ್ಲಿ ಪದಕ ಗೆಲ್ಲುವ ವಿಶ್ವಾಸದಲ್ಲಿದೆ