ಗ್ರಾಮಾಂತರ ಪ್ರದೇಶದಲ್ಲಿ ಹಗಲು ಅಡುಗೆ-ಯಜ್ಞಕ್ಕೆ ಬಿಹಾರದಲ್ಲಿ ನಿಷೇಧ
ಪಾಟ್ನಾ, ಎ.28: ಗ್ರಾಮಾಂತರ ಪ್ರದೇಶಗಳಲ್ಲಿ ಮುಂಜಾನೆ 9ರಿಂದ ಸಂಜೆ 6 ಗಂಟೆಯವರೆಗೆ ಅಡುಗೆ, ಪೂಜೆ ಅಥವಾ ಯಾವುದೇ ಧಾರ್ಮಿಕ ಚಟುವಟಿಕೆಗಳನ್ನು ನಡೆಸಬಾರದೆಂಬ ವಿಲಕ್ಷಣ ಸಲಹೆಯೊಂದನ್ನು ಬಿಹಾರ ಸರಕಾರ ಹೊರಡಿಸಿದೆ.
ಈ ತಿಂಗಳಲ್ಲಿ ಪಶ್ಚಿಮದಿಂದ ಗಾಳಿ ಬೀಸುವ ವೇಳೆ ಬೆಂಕಿ ಅನಾಹುತಗಳು ಅಸಾಧಾರಣವಾಗಿ ಏರಿದೆ. ಅದನ್ನು ತಡೆಯಲು ಈ ಕ್ರಮ ನೆರವಾಗಲಿದೆಯೆಂದು ಸರಕಾರ ಹೇಳುತ್ತಿದೆ.
ಬೇಸಿಗೆಯ ತುರೀಯಾವಸ್ಥೆಯಲ್ಲಿದೆ ಹಾಗೂ ಬೆಂಕಿಯ ಕಾರಣದಿಂದ ಅವಘಡಗಳು ಸಂಭವಿಸಿತ್ತಿವೆಯೆಂದು ವಿಕೋಪ ಪ್ರಬಂಧನ ಇಲಾಖೆಯ ಪ್ರಧಾನ ಕಾರ್ಯದರ್ಶಿ ವ್ಯಾಸಜಿ ತಿಳಿಸಿದ್ದಾರೆ.
ಎಲ್ಲ ವಿಭಾಗೀಯ ಆಯುಕ್ತರು ಹಾಗೂ ಜಿಲ್ಲಾ ದಂಡಾಧಿಕಾರಿಗಳಿಗೆ ಕಳುಹಿಸಿರುವ ಪತ್ರದಲ್ಲಿ, ಗ್ರಾಮಾಂತರ ಪ್ರದೇಶಗಳಲ್ಲಿ ವಾಸಿಸುವವರು ಬೆಳಗ್ಗೆ 9 ಗಂಟೆಯೊಳಗೆ ಅಡುಗೆಯ ಕೆಲಸ ಮುಗಿಸಬೇಕು ಹಾಗೂ ರಾತ್ರಿಯ ಅಡುಗೆಯನ್ನು ಸಂಜೆ 6ರ ಬಳಿಕವೇ ನಡೆಸಬೇಕೆಂದು ಸೂಚಿಸಿದ್ದಾರೆ.
ಅನೇಕ ವರ್ಷಗಳಿಂದ ನೆರೆ ಹಾಗೂ ಬರವನ್ನು ಎದುರಿಸಿರುವ ಬಿಹಾರವು ಈ ವರ್ಷ ಬೆಂಕಿ ಅಪಘಾತವೆಂಬ ಬೇರೆಯೇ ವಿನಾಶದಿಂದ ಬಳಲುತ್ತಿದೆ.
ಈ ದಿನಗಳಲ್ಲಿ ಅಭೂತ ಪೂರ್ವ ಅನುಭವಿಸುತ್ತಿರುವ ಬಿಹಾರದಾದ್ಯಂತ 60ಕ್ಕೂ ಹೆಚ್ಚುವರಿ ಸಾವಿಗೀಡಾಗಿದ್ದು, ಲಕ್ಷಾಂತರ ವೌಲ್ಯದ ಆಸ್ತಿ ಹಾನಿಯಾಗಿದೆ.