ಸೋನಿಯಾ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಿಸಲು ಮನವಿ
Update: 2016-04-28 23:49 IST
ಹೊಸದಿಲ್ಲ, ಎ.28: ಆಗಸ್ಟಾ ವೆಸ್ಟ್‌ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಹಗರಣದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಸೋನಿಯಾರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸುವಂತೆ ಕೋರಿರುವ ಮನವಿಯೊಂದರ ವಿಚಾರಣೆಗೆ ಸುಪ್ರೀಂಕೋರ್ಟ್ ಸಮ್ಮತಿಸಿದೆ. ಅದನ್ನು ಮುಂದಕ್ಕೆ ಒಯ್ಯಬೇಕೇ ಎಂಬುದನ್ನು ಅದು ಮುಂದಿನ ವಾರ ನಿರ್ಧರಿಸಲಿದೆ. ವಿವಿಐಪಿ ಹೆಲಿಕಾಪ್ಟರ್ ಖರೀದಿ ಹಗರಣದ ಸಂಬಂಧ ಇಟಲಿಯ ನ್ಯಾಯಾಲಯವೊಂದು ನೀಡಿರುವ ತೀರ್ಪಿನ ಪರಿಚ್ಛೇದ ದಾಖಲೆಗಳಲ್ಲಿ ಹೆಸರಿಸಲಾಗಿರುವ ಈ ಮೂವರು ಕಾಂಗ್ರೆಸ್ ನಾಯಕರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಆದೇಶಿಸಲು ವಕೀಲ ಎಂ.ಎಲ್. ಶರ್ಮ ಎಂಬವರು ಸುಪ್ರೀಂಕೋರ್ಟ್ ಈ ವರದಿ ಸಲ್ಲಿಸಿದ್ದಾರೆ.