ರೋಗಿಯ ನಿರ್ಲಕ್ಷ್ಯ: ಆಸ್ಪತ್ರೆಗೆ ಒಂದು ಕೋಟಿ ರೂ. ದಂಡ!

Update: 2016-04-30 07:58 GMT

ಹೊಸದಿಲ್ಲಿ, ಎಪ್ರಿಲ್ 30: ದಿಲ್ಲಿಯ ಬಳಕೆದಾರರ ಆಯೋಗ ಅನಾವಶ್ಯಕ ಉಪಚಾರ ಮತ್ತು ನಿರ್ಲಕ್ಷ್ಯ ಆರೋಪದಲ್ಲಿ ಎಕ್ಸ್‌ಫರ್ಟ್ ಆಸ್ಪತ್ರೆಯ ವಿರುದ್ಧ ಒಂದು ಕೋಟಿ ರೂಪಾಯ ದಂಡ ವಿಧಿಸಿದೆ. ಎನ್.ಪಿ ಕೌಶಿಕ್ ಅಧ್ಯಕ್ಷತೆಯ ಆಯೋಗೆ ಮೊದಲು 75 ಲಕ್ಷ ರೂಪಾಯಿ ದಂಡ ತೆರಲು ಹೇಳಿತ್ತು. ಆದರೆ ಆಸ್ಪತ್ರೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ವಿಫಲವಾಗಿತ್ತು ಎಂದು ವರದಿಗಳು ತಿಳಿಸಿವೆ.

ಅದೇ ವೇಳೆ ಈ ಪ್ರಕರಣದಲ್ಲಿ ಕೋರ್ಟ್ ನಿರ್ಲಕ್ಷ್ಯಕ್ಕಾಗಿ ಆಸ್ಪತ್ರೆ ರೋಗಿಯ ಕುಟುಂಬಕ್ಕೆ ಇಪ್ಪತ್ತು ಲಕ್ಷ ರೂಪಾಯಿ ದಂಡ ವಿಧಿಸಿತ್ತು ಅದೀಗ ಬಡ್ಡಿ ಸೇರಿ ಇಪ್ಪತೈದು ಲಕ್ಷ ರೂಪಾಯಿ ಆಗಿದೆ. ಒಟ್ಟು ಒಂದು ಕೋಟಿರೂಪಾಯಿ ದಂಡ ಆಸ್ಪತ್ರೆ ಪಾವತಿಸಬೇಕಾಗಿದೆ.                                                   

ಈ ಆಸ್ಪತ್ರೆಯ ನಿರ್ಕ್ಷ್ಯದಿಂದಾಗಿ ರೋಗಿಯ ಕಾಲನ್ನು ತುಂಡರಿಸಬೇಕಾಗಿ ಬಂದಿತ್ತು. ಆದ್ದರಿಂದ ರೋಗಿ ಮೃತರಾಗಿದ್ದರು. ಬಳಕೆದಾರ ಆಯೋಗವು ಬಳಕೆದಾರ ಸಂರಕ್ಷಣೆ ಕಾನೂನಿನ ಪ್ರಕಾರ ಕ್ರಮಕೈಗೊಂಡಿದೆ ಎಂದು ವರದಿಗಳು ತಿಳಿಸಿವೆ. ಕೋಶಿ ಮಲ್ಹೊತ್ರ ಎಂಬವರು 2008ರಲ್ಲಿ ದೂರು ನೀಡಿದದರು. ಆರು ವರ್ಷದ ಹೋರಾಟದಲ್ಲಿ ಮೃತರಾದ ಅವರ ಪತ್ನಿಗೆ ನ್ಯಾಯ ದೊರಕಿದೆ. ಆಸ್ಪತ್ರೆಯ ನಿರ್ಲಕ್ಷ್ಯದಿಂದಾಗಿ ತನ್ನ ಪತ್ನಿಯ ಕಾಲು ಕತ್ತರಿಸಬೇಕಾಯಿತು. ಆನಂತರ ಅಸಹನೀಯ ನೋವು ಅನುಭವಿಸಿ ಆಕೆ ಮೃತರಾದರು . ಪತ್ನಿಯ ಸರ್ಜರಿಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಅವರು ದೂರು ನೀಡಿದ್ದರು. ಇದೀಗ ಒಟ್ಟು ಒಂದು ಕೋಟಿ ದಂಡ ಆಸ್ಪತ್ರೆಗೆ ವಿಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News