×
Ad

ವಿಶಾಖಪಟ್ಟಣದಲ್ಲಿ ಮುಂಬೈ, ಪುಣೆಯ ‘ತವರು’ ಪಂದ್ಯ

Update: 2016-04-30 23:06 IST

ಬೆಂಗಳೂರಿನಲ್ಲಿ ಐಪಿಎಲ್ ಫೈನಲ್

ಮುಂಬೈ, ಎ.30: ಮುಂಬೈ ಇಂಡಿಯನ್ಸ್ ಹಾಗೂ ರೈಸಿಂಗ್ ಪುಣೆ ಸೂಪರ್‌ಜಯಂಟ್ಸ್ ತಂಡಗಳ ‘ತವರು’ ಪಂದ್ಯಗಳ ಆತಿಥ್ಯವನ್ನು ವಿಶಾಖಪಟ್ಟಣ ವಹಿಸಿಕೊಳ್ಳಲಿದೆ ಎಂದು ಐಪಿಎಲ್ ಆಡಳಿತ ಮಂಡಳಿ ತಿಳಿಸಿದೆ.

ಹೊಸದಿಲ್ಲಿಯಲ್ಲಿ ಕ್ವಾಲಿಫೈಯರ್ ಹಾಗೂ ಎಲಿಮಿನೇಟರ್ ಪಂದ್ಯಗಳು ನಡೆಯುತ್ತವೆ. ಬೆಂಗಳೂರು ಮೊದಲ ಕ್ವಾಲಿಫೈಯರ್ ಹಾಗೂ ಫೈನಲ್ ಪಂದ್ಯದ ಆತಿಥ್ಯವನ್ನು ವಹಿಸಿಕೊಳ್ಳಲಿದೆ. ಪಂದ್ಯಗಳ ಆತಿಥ್ಯವನ್ನು ವಹಿಸಿಕೊಳ್ಳಲು ಕೊನೆ ತನಕ ಪ್ರಯತ್ನ ನಡೆಸಿರುವ ರಾಜಸ್ಥಾನ ಸರಕಾರಕ್ಕೆ ಐಪಿಎಲ್ ಆಡಳಿತ ಮಂಡಳಿ ಕೃತಜ್ಞತೆ ಸಲ್ಲಿಸಲಿದೆ. ಸಮಯದ ಅಭಾವ ಹಾಗೂ ಪಂದ್ಯಗಳ ಆತಿಥ್ಯದ ಬಗ್ಗೆ ಗೊಂದಲಗಳು ಇದ್ದ ಕಾರಣ ವಿಶಾಖಪಟ್ಟಣವನ್ನು ಮುಂಬೈ ಹಾಗೂ ಪುಣೆ ತಂಡಗಳ ತವರು ತಾಣವಾಗಿ ಆಯ್ಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮುಂಬೈ ತಂಡ ಜೈಪುರವನ್ನು ತನ್ನ ತವರು ತಾಣವಾಗಿ ಆಯ್ಕೆ ಮಾಡಿತ್ತು. ರಾಜಸ್ಥಾನದಲ್ಲಿ ಕುಡಿಯುವ ನೀರಿನ ಕೊರತೆ ಇರುವುದರಿಂದ ಐಪಿಎಲ್ ಪಂದ್ಯವನ್ನು ಆಯೋಜಿಸುವುದನ್ನು ವಿರೋಧಿ ನ್ಯಾಯಾಲಯದಲ್ಲಿ ಪಿಐಎಲ್ ದಾಖಲಾಗಿತ್ತು. ಸೂಪರ್‌ಜಯಂಟ್ಸ್ ತಂಡ ಈ ಮೊದಲೇ ವಿಶಾಖಪಟ್ಟಣವನ್ನು ತವರು ತಾಣವಾಗಿ ಆಯ್ಕೆ ಮಾಡಿತ್ತು.

ಮೇ 15ರಂದು ನಡೆಯುವ ಎರಡು ಪಂದ್ಯಗಳ ವೇಳಾಪಟ್ಟಿಯನ್ನು ಬದಲಿಸಲಾಗಿದೆ. ಪಂಜಾಬ್-ಹೈದರಾಬಾದ್ ಪಂದ್ಯ ಮೊಹಾಲಿಯಲ್ಲಿ ಸಂಜೆ 4ಕ್ಕೆ ಆರಂಭವಾಗಲಿದೆ. ಮುಂಬೈ-ಡೆಲ್ಲಿ ನಡುವಿನ ಪಂದ್ಯ ವಿಶಾಖಪಟ್ಟಣದಲ್ಲಿ ರಾತ್ರಿ 8ಕ್ಕೆ ನಡೆಯುವುದು. ಪಂಜಾಬ್ ತಂಡ ಧರ್ಮಶಾಲಾದ ಬದಲಿಗೆ ಮೊಹಾಲಿಯಲ್ಲಿ ಮೇ7(ಡೆಲ್ಲಿ), ಮೇ 9(ಆರ್‌ಸಿಬಿ) ಹಾಗೂಮೇ 15ಕ್ಕೆ (ಹೈದರಾಬಾದ್) ಪಂದ್ಯಗಳನ್ನು ಆಡಲಿದೆ.

ಕಾನ್ಪುರ ಇದೇ ಮೊದಲ ಬಾರಿ ಐಪಿಎಲ್ ಪಂದ್ಯದ ಆತಿಥ್ಯವಹಿಸಿಕೊಂಡಿದೆ. ಅಲ್ಲಿನ ಗ್ರೀನ್‌ಪಾರ್ಕ್‌ನಲ್ಲಿ ಕ್ರಮವಾಗಿ ಮೇ 19 ಹಾಗೂ 21 ರಂದು ಗುಜರಾತ್ ತಂಡ ಕೋಲ್ಕತಾ ಹಾಗೂ ಮುಂಬೈ ಇಂಡಿಯನ್ಸ್ ವಿರುದ್ಧ ಆಡಲಿದೆ.

ನಾಕೌಟ್ ಪಂದ್ಯಗಳ ಪರಿಷ್ಕೃತ ಸ್ಥಳಗಳು:

ಮೇ 24: ಕ್ವಾಲಿಫೈಯರ್-1, ಬೆಂಗಳೂರು

ಮೇ 25: ಎಲಿಮಿನೇಟರ್, ಹೊಸದಿಲ್ಲಿ

ಮೇ 27: ಕ್ವಾಲಿಫೈಯರ್ 2, ಹೊಸದಿಲ್ಲಿ

ಮೇ 29: ಫೈನಲ್, ಬೆಂಗಳೂರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News