ಲಲಿತ್ ಮೋದಿ ವಿದೇಶದಲ್ಲಿ ಕುಳಿತು ಐಪಿಎಲ್‌ನಲ್ಲಿ ಚಲನೆ ಸೃಷ್ಟಿಸಬಲ್ಲರೇ?
ಹೊಸದಿಲ್ಲಿ,ಮೇ 1: ದೇಶದ ಹೊರಗೆ ಕೂತು ಲಲಿತ್‌ಮೋದಿ ಐಪಿಲ್ ಟ್ವೆಂಟಿ-20 ಕ್ರಿಕೆಟ್ ಪಂದ್ಯಾಟಗಳಲ್ಲಿ ಹಸ್ತಕ್ಷೇಪ ನಡೆಸುತ್ತಿದ್ದಾರೆ ಅಥವಾ ಚಲನೆ ಸೃಷ್ಟಿಸಬಲ್ಲರು ಎಂದು ಹೇಳಲಾಗುತ್ತಿದೆ. ಲಲಿತ್‌ರ ಒಂದು ಟ್ವೀಟ್ ಜೈಪುರದಲ್ಲಿ ಐಪಿಎಲ್ ಮ್ಯಾಚ್ ನಡೆಯುವುದನ್ನು ತಪ್ಪಿಸಿದೆ. ಮಹಾರಾಷ್ಟ್ರದಿಂದ ಹೊರಗೆ ಹೋದ ಪಂದ್ಯವನ್ನು ಜೈಪುರಕ್ಕೆ ನೀಡಲಾಗಿತ್ತು. ಈಗ ಮುಂಬೈ ಇಂಡಿಯನ್ಸ್ ಮತ್ತು ರೈಸಿಂಗ್ ಪುಣೆ ಸೂಪರ್‌ಜಾಯಿಂಟ್ಸ್ ಪಂದ್ಯವನ್ನು ವಿಶಾಖ ಪಟ್ಟಣಂಗೆ ಹಸ್ತಾಂತರಿಸಲಾಗಿದ್ದು ಇದಕ್ಕೆ ಮೋದಿಯ ಒಂದು ಟ್ವೀಟ್ ಕಾರಣ ಎಂದು ವರದಿಗಳು ತಿಳಿಸಿವೆ. ಮೊದಲುಈ ಪಂದ್ಯವನ್ನು ಜೈಪುರದಲ್ಲಿ ಏರ್ಪಡಿಸುವುದೆಂದು ತೀರ್ಮಾನಿಸಲಾಗಿತ್ತು. ಲಲಿತ್‌ಮೋದಿ ಶುಕ್ರವಾರದಂದು ಟ್ವೀಟ್ ಮಾಡಿ ಆರ್‌ಸಿಎ(ರಾಜಸ್ಥಾನ ಕ್ರಿಕೆಟ್ ಅಸೋಸಿಯೇಶನ್) ಕ್ರಿಡಾಂಗಣವನ್ನು ಸಿದ್ಧಪಡಿಸಿದ್ದಕ್ಕಾಗಿ ಶ್ಲಾಘಿಸಿದ್ದರು. ಈ ಟ್ವೀಟ್ ಮಾಡಿ ಕೆಲವೇ ಗಂಟೆಗಳ ನಂತರ ಮ್ಯಾಚ್ ಜೈಪುರದಿಂದ ವಿಶಾಖ ಪಟ್ಟಣಕ್ಕೆ ಸ್ಥಾನಂತರಿಸಲಾಗಿತ್ತು ಎಂದು ವರದಿಗಳು ತಿಳಿಸಿವೆ.