ಇರಾಕ್ ಪಾರ್ಲಿಮೆಂಟ್‌ಗೆ ಪ್ರತಿಭಟನಾಕಾರರಿಂದ ಮುತ್ತಿಗೆ: ಬಗ್ದಾದ್‌ನಲ್ಲಿ ತುರ್ತುಪರಿಸ್ಥಿತಿ ಘೋಷಣೆ!
ಬಾಗ್ದಾದ್, ಮೇ 1:ಶಿಯಾ ನಾಯಕ ಮುಖ್ತದ ಅಲ್‌ಸದ್ರ್‌ರ ಅನುಯಾಯಿಗಳು ಪಾರ್ಲಿಮೆಂಟ್‌ನ ಮುತ್ತಿಗೆ ಹಾಕಿರುವ ಹಿನ್ನೆಯಲೆಯಲ್ಲಿ ಇರಾಕ್ ರಾಜಧಾನಿ ಬಾಗ್ದಾದ್‌ನಲ್ಲಿ ತುರ್ತುಪರಿಸ್ಥಿತಿ ಘೋಷಿಸಲಾಗಿದೆ ಎಂದು ವರದಿಯಾಗಿದೆ. ಸರಕಾರದ ಪುನರ್ರಚನೆಯ ಕ್ರಮಗಳು ವಿಫಲವಾದ್ದರಿಂದ ಪ್ರತಿಭನೆಕಾರರು ತಂತ್ರ ಪ್ರಧಾನ ಪ್ರದೇಶವಾದ ಗ್ರೀನ್‌ಝೋನ್‌ಗೆ ನುಗ್ಗಿದರು. ಪ್ರತಿಭಟನೆಗಾರರು ಶನಿವಾರ ರಾತ್ರಿ ಕೂಡಾ ಗ್ರೀನ್ ಝೋನ್‌ನಲ್ಲಿ ಡೇರೆ ಹಾಕಿ ಕುಳಿತಿದ್ದರು. ಗ್ರೀನ್ ಝೋನ್ ಎಂದರೆ ವಿದೇಶಗಳ ರಾಯಭಾರಿ ಕಚೇರಿಯಿರುವ ಕಟ್ಟೆಚ್ಚರದ ಪ್ರದೇಶವಾಗಿದೆ.
ಪ್ರಧಾನಿ ಹೈದರ್‌ಅಲಿ ಆಬಾದಿ ಅವರ ನಿರ್ದೇಶ ಪ್ರಕಾರ ಕ್ಯಾಬಿನೆಟ್ ಪುನರ್ರಚನೆಗೆ ನಡೆಸಿದ್ದ ಪ್ರಯತ್ನಗಳೆಲ್ಲ ವಿಫಲವಾದ್ದರಿಂದ ಪಾರ್ಲಿಮೆಮಂಟ್‌ನಲ್ಲಿ ಕೋಲಾಹಲ ಸೃಷ್ಟಿಯಾಗಿತ್ತು. ಪ್ರತಿಭಟನಾಕಾರರು ತಜ್ಞರನ್ನು ಬಳಸಿಕೊಂಡು ಹೆಚ್ಚು ಸುಧಾರಾಣಾತ್ಮಕ ಸರಕಾರ ರಚನೆಗೊಳ್ಳಬೇಕೆಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಪ್ರತಿಭಟನೆ ಬಲಗೊಂಡ ಹಿನ್ನೆಲೆಯಲ್ಲಿ ಸಚಿವ ಸಂಪುಟವನ್ನು ಅಂಶಿಕ ಪುನರ್ರಚನೆಗೆ ಪಾರ್ಲಿಮೆಂಟ್ ಅನುಮತಿ ನೀಡಿತ್ತು ಎಂದು ವರದಿಗಳು ಹೇಳಿವೆ.