ವೈಟ್‌ಹೌಸ್ ಡಿನ್ನರ್‌ನಲ್ಲಿ ಬ್ಯ್ಲಾಕ್ ಡ್ರೆಸ್ ಗ್ಲಾಮರ್
Update: 2016-05-01 18:00 IST
ವಾಷಿಂಗ್ಟನ್: ವಾಷಿಂಗ್ಟನ್ ಹಿಲ್ಟನ್‌ನಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಆಯೋಜಿಸಿದ ಪ್ರತಿಷ್ಠಿತ "ವೈಟ್‌ಹೌಸ್ ಡಿನ್ನರ್"ನಲ್ಲಿ ಬಾಲಿವುಡ್ ಸುಂದರಿ ಪ್ರಿಯಾಂಕಾ ಛೋಪ್ರಾ ಕಡುಗಪ್ಪು ಬಣ್ಣದ ಉಡುಗೆಯೊಂದಿಗೆ ಪಾಲ್ಗೊಂಡು ಮಿಂಚು ಪ್ರತಿಷ್ಠಿತ ಗಣ್ಯರ ರಾತ್ರಿಗೆ ವಿಶೇಷ ಮೆರುಗು ನೀಡಿದರು.
ಶನಿವಾರ ರಾತ್ರಿ ಒಬಾಮಾ ಆಡಳಿತದ ಕಟ್ಟಕಡೆಯ ವೈಟ್‌ಹೌಸ್ ಕರೆಸ್ಪಾಂಡೆಟ್ಸ್ ಡಿನ್ನರ್‌ನಲ್ಲಿ ಈ ಗ್ಲಾಮರ್ ತಾರೆ, ಜುಹೇರ್ ಮುರಾದ್ ದಿರಿಸಿನಲ್ಲಿ ಮಿನುಗುವ ಮೂಲಕ ಔತಣಕೂಟಕ್ಕೆ ವಿಶೇಷ ಮೆರುಗು ನೀಡಿದರು.
ಬೇವಾಚ್ ರಿಬೂಟ್‌ನಲ್ಲಿ ವಿಕ್ಟೋರಿಯಾ ಲೀಡ್ಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಪ್ರಿಯಾಂಕಾ ಇಡೀ ಔತಣಕೂಟದಲ್ಲಿ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು. ಈಕೆಯ ಜತೆಗೆ ಮಾದಕ ನಟಿ ಕೆಲ್ಲೆ ರೊಹ್ರ್‌ಬಾಚ್ ಕೂಡಾ ಆಕರ್ಷಕ ನೆಕ್‌ಲೈನ್‌ನೊಂದಿಗೆ ಭಾರತದ ತಾರೆಗೆ ಪೈಪೋಟಿ ನೀಡಿದರು.