ಪ್ರತಿಭಟನಾಕಾರರನ್ನು ಬಂಧಿಸಿ : ಇರಾಕ್ ಪ್ರಧಾನಿ ಆದೇಶ
ಬಗ್ದಾದ್, ಮೆ 1: ಇರಾಕ್ ಪ್ರಧಾನ ಮಂತ್ರಿ ಹೈದರ್-ಅಲ್-ಅಬಾದಿ ಅವರು ಶನಿವಾರ ಇರಾಕ್‌ನ ಸಂಸತ್ತಿಗೆ ನುಗ್ಗಿ ಭದ್ರತಾ ಸಿಬ್ಬಂದಿ ಮತ್ತು ಸಂಸತ್ ಸದಸ್ಯರ ಮೇಲೆ ಹಲ್ಲೆ ನಡೆಸಿದ ಶಿಯಾ ಪ್ರತಿಭಟನಾಕಾರರ ವಿರುದ್ಧ ಕ್ರಮ ಜರಗಿಸಲು ಆದೇಶಿಸಿರುವುದಾಗಿ ವರದಿಯಾಗಿದೆ.
ಪ್ರತಿಭಟನಾಕಾರರು ಯಾವೆಲ್ಲ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ ಮತ್ತು ಸಾರ್ವಜನಿಕ ಸೊತ್ತಿಗೆ ಹಾನಿವುಂಟು ಮಾಡಿದ್ದಾರೆ ಅವರನ್ನು ಬಂಧಿಸಬೇಕು ಎಂದು ಪ್ರಧಾನಿ ಆದೇಶ ನೀಡಿದ್ದಾರೆ.ಬಿಬಿಸಿ ವರದಿಗಾರ ಅಹ್ಮದ್ ಮೆಹರ್‌ರ ಪ್ರಕಾರ ಅಮೆರಿಕದಲ್ಲಿ ದಾಳಿ ಮತ್ತು ಸದ್ದಾಮ್ ಹುಸೈನ್‌ರ ಸರಕಾರ ಬದಲಿಸಿದ ಬಳಿಕ ಇದು ಇರಾಕ್‌ನಲ್ಲಿ ಗಂಭೀರ ರಾಜಕೀಯ ಸಂಕಟವಾಗಿದೆ ಎಂದು ತಿಳಿಸಿದ್ದಾರೆ.
ದೇಶದ ರಾಜಧಾನಿ ಬಾಗ್ದಾದ್‌ನಲ್ಲಿ ಸಂಸತ್‌ನ ಹೊರಗೆ ಗ್ರೀನ್‌ಝೋನ್‌ನಲ್ಲಿ ಈಗಲೂ ನೂರಾರು ಪ್ರತಿಭಟನಾಕಾರರು ಕೂತಿದ್ದಾರೆ. ಶನಿವಾರದ ಪ್ರತಿಭಟನೆಯ ಬಳಿಕ ಬಾಗ್ದಾನ್‌ನಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿತ್ತು. ಇದೀಗ ಪ್ರತಿಭಟನಾಕಾರರ ವಿರುದ್ಧ ಕ್ರಮಕೈಗೊಳ್ಳು ಪ್ರಧಾನಿ ಆದೇಶಿಸಿದ್ದಾರೆ ಎಂದು ವರದಿಯಾಗಿದೆ.