×
Ad

ನನ್ನ ಬಳಿ ಐಫೋನ್ ಬಿಡಿ ಮೊಬೈಲ್ ಫೋನ್ ಕೂಡಾ ಕಷ್ಟದ ವಿಚಾರ, ನನ್ನ ಖಾತೆಯಲ್ಲಿ 200ರೂ. ಇದೆ: ಕನ್ಹಯ್ಯ ಕುಮಾರ್

Update: 2016-05-01 23:05 IST

 ಪಾಟ್ನಾ,ಮೇ 1: ಜವಾಹರ್ ನೆಹರೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾಕುಮಾರ್ ತನ್ನ ಬಳಿ ಪಬ್ಲಿಕ್ ರಿಲೇಶನ್ ಆಫೀಸರ್ ಮತ್ತು ಐಫೋಣ್ ಇದೆ ಎಂಬುದನ್ನು ನಿರಾಕರಿಸಿದ್ದಾರೆ. ವಿಮಾನದಲ್ಲಿಬಿಸಿನೆಸ್ ಕ್ಲಾಸ್‌ನಲ್ಲಿ ಪ್ರಯಾಣಿಸುತ್ತಿದ್ದಾರೆಂದೂ ಆರೋಪ ಹೊರಿಸಲಾಗಿತ್ತು. ಇವನ್ನೆಲ್ಲ ನಿರಾಕರಿಸಿದ ಕನ್ಹಯ್ಯೆ ನನ್ನ ಬಳಿ ಯಾವುದೇ ಪಿಆರ್‌ಓ ಇಲ್ಲ ನನಗೆ ಅದರ ಆವಶ್ಯಕತೆಯೇನಿದೆ? ಈ ಅಪಪ್ರಚಾರವನ್ನು ನನ್ನ ವಿರುದ್ಧ ಕೆಲಸ ಮಾಡುವ ಶಕ್ತಿಗಳ ಭಾಗವಾಗಿರುವ ಜನರು ಹಬ್ಬಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

 ಫೆಬ್ರವರಿಯಲ್ಲಿ ಜೆಎನ್‌ಯು ಪರಿಸರದಲ್ಲಿ ಭಾರತ ವಿರೋಧಿ ಘೋಷಣೆ ಕೂಗಲಾಯಿತೆನ್ನಲಾದ ಬಳಿಕ ದೇಶದ್ರೋಹ ಆರೋಪವನ್ನು ಅವರ ವಿರುದ್ಧ ಹೊರಿಸಲಾಗಿತ್ತು. ಅದರ ನಂತರ ಕುಮಾರ್‌ರನ್ನು ಬಂಧಿಸಲಾಗಿತ್ತು. ಜಾಮೀನಿನಲ್ಲಿ ಬಿಡುಗಡೆಗೊಂಡ ಬಳಿಕ ಕನ್ಹಯ್ಯೋ ಮೊದಲ ಬಾರಿ ಬಿಹಾರಕ್ಕೆ ಆಗಮಿಸಿದ್ದಾರೆ.

ಕನ್ಹಯ್ಯ ಆರೋಪವನ್ನು ಖಂಡಿಸಿ ನನ್ನ ಬಳಿ ಸೇಲ್‌ಫೋನ್ ಕೂಡ ಇಲ್ಲ. ನೀವು ಐಫೋನ್‌ನ್ನು ಮರೆತು ಬಿಡಿ. ಕೆಲವರು ತಾನು ಐಫೋನ್ ಹೊಂದಿದ್ದಾನೆಂದು ಅಪಪ್ರಚಾರ ನಡೆಸುತ್ತಿದ್ದಾರೆ.ನಾನು ವಿಮಾನದಲ್ಲಿ ನನ್ನ ಖರ್ಚಿನಲ್ಲಿ ಪ್ರಯಾಣಿಸುತ್ತಿಲ್ಲ. ಪ್ರಯಾಣದ ಖರ್ಚನ್ನು ಕಾರ್ಯಕ್ರಮ ಆಯೋಜಕರು ವಹಿಸಿಕೊಳ್ಳುತ್ತಾರೆ.ಆವರು ತಮ್ಮ ವಿರೊಧ ಪ್ರತಿಭಟನೆಗೆ ನನ್ನನ್ನು ಕರೆಯುತ್ತಾರೆ.ನನಗೆ ಜುಲೈ 2015ರ ನಂತರ ಸ್ಕಾಲರ್‌ಶಿಪ್‌ನ ಹಣ ಸಿಕ್ಕಿಲ್ಲ. ಹೀಗಿರುವಾಗ ನನ್ನ ಬಳಿ ವಿಮಾನದ ಟಿಕೆಟು ಖರೀದಿಸಲು ಎಲ್ಲಿರುತ್ತದೆ ಎಂದು ಪ್ರಶ್ನಿಸಿದ್ದಾರೆ.

ನಾನು ಅಂಗನವಾಡಿ ವರ್ಕರ್‌ನ ಮಗ. ನನ್ನ ತಂದೆ ಲಕ್ವಾ ಪೀಡಿತರು. ನಾನು ಹೇಗೋಹೇಗೋ ನಿಭಾಯಿಸುತ್ತಿದ್ದೇನೆ. ಜೆಎನ್‌ಯು ನೂರಾರು ವಿದ್ಯಾರ್ಥಿಗಳ ನೆರವಿಗೆ ಕೃತಜ್ಞತೆಗಳು. ಮಹಾರಾಷ್ಟ್ರದಲ್ಲಿ ಸಫಾಯಿ ಕರ್ಮಾಚಾರಿಗಳು ಜೆಎನ್‌ಯು ಆಡಳಿತ ನನ್ನ ಮೇಲೆ ಹೇರಿರುವ ಹತ್ತು ಸಾವಿರ ರೂಪಾಯಿ ದಂಡವನ್ನು ಸಂಗ್ರಹಿಸಿದ್ದೇವೆ ಎಂದು ಹೇಳಿದ್ದಾರೆ. ಇದು ಸರಿಯಾದ ದಿಕ್ಕಿನಲ್ಲಿ ಕೆಲಸ ಮಾಡಿದರೆ ಜನರು ನೆರವನ್ನೇ ಹರಿಸುತ್ತಾರೆ ಎಂಬುದಕ್ಕೆ ಉದಾಹರಣೆಯಾಗಿದೆ. ಇದು ಭಾರತದ ಸೌಂದರ್ಯವಾಗಿದೆಎಂದು ಕನ್ಹಯ್ಯೆ ಕುಮಾರ್ ಹೇಳಿದ್ದಾರೆ.

ಕನ್ಹಯ್ಯ ತನ್ನ ಎಕೌಂಟ್‌ನಲ್ಲಿ 200ರೂಪಾಯಿ ಮಾತ್ರ ಇದೆ. ಯಾರೂ ಬೇಕಾದರೂ ತನ್ನ ಎಕೌಂಟನ್ನು ಪರಿಶೀಲಿಸಬಹುದೆಂದು ಅವರು ಹೇಳಿರುವುದಾಗಿ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News