×
Ad

ಭಾರತೀಯ ಅಮೆರಿಕನ್ ಪತ್ರಕರ್ತೆಗೆ ಪ್ರತಿಷ್ಠಿತ ಪ್ರಶಸ್ತಿ

Update: 2016-05-02 18:30 IST

ವಾಶಿಂಗ್ಟನ್, ಮೇ 2: ವಾಶಿಂಗ್ಟನ್‌ನಲ್ಲಿ ರವಿವಾರ ನಡೆದ ವಾರ್ಷಿಕ ಶ್ವೇತಭವನ ವರದಿಗಾರರ ಔತಣಕೂಟದಲ್ಲಿ ಭಾರತೀಯ ಅಮೆರಿಕನ್ ಪತ್ರಕರ್ತೆ ನೀಲಾ ಬ್ಯಾನರ್ಜಿ ಮತ್ತು ಅವರ ಮೂವರು ಸಹೋದ್ಯೋಗಿಗಳನ್ನು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಮತ್ತು ಪ್ರಥಮ ಮಹಿಳೆ ಮಿಶೆಲ್ ಒಬಾಮ ಸನ್ಮಾನಿಸಿದರು.

‘ಇನ್‌ಸೈಡ್ ಕ್ಲೈಮೇಟ್ ನ್ಯೂಸ್’ನ ನೀಲಾ ಬ್ಯಾನರ್ಜಿ, ಜಾನ್ ಕಶ್ಮನ್ ಜೂನಿಯರ್, ಡೇವಿಡ್ ಹ್ಯಾಸೆಮ್ಯರ್ ಮತ್ತು ಲಿಸಾ ಸಾಂಗ್ ಅವರಿಗೆ ಪ್ರತಿಷ್ಠಿತ ಎಡ್ಗರ್ ಎ ಪೋ ಪ್ರಶಸ್ತಿಯನ್ನು ನೀಡಲಾಯಿತು.

ಶ್ವೇತಭವನ ವರದಿಗಾರರ ಅಸೋಸಿಯೇಶನ್ ನೀಡುವ ಪ್ರಶಸ್ತಿಯನ್ನು ರಾಷ್ಟ್ರೀಯ ಅಥವಾ ಪ್ರಾದೇಶಿಕ ಮಹತ್ವದ ಮಾಧ್ಯಮ ಕೆಲಸಕ್ಕಾಗಿ ನೀಡಲಾಗುತ್ತದೆ.

ವಾಶಿಂಗ್ಟನ್ ಡಿಸಿಯಲ್ಲಿ ನೆಲೆಸಿರುವ ಪತ್ರಕರ್ತೆ ನೀಲಾ ಬ್ಯಾನರ್ಜಿ, ಇನ್‌ಸೈಡ್ ಕ್ಲೈಮೇಟ್ ನ್ಯೂಸ್‌ನ್ನು ಸೇರುವ ಮೊದಲು ‘ಲಾಸ್ ಏಂಜಲಿಸ್ ಟೈಮ್ಸ್’ನ ವಾಶಿಂಗ್ಟನ್ ಬ್ಯೂರೊದ ಇಂಧನ ಮತ್ತು ಪರಿಸರ ವರದಿಗಾರ್ತಿಯಾಗಿದ್ದರು.

‘ನ್ಯೂಯಾರ್ಕ್ ಟೈಮ್ಸ್’ನಲ್ಲೂ ಕೆಲಸ ಮಾಡಿದ್ದ ಅವರು ಜಾಗತಿಕ ಇಂಧನ, ಇರಾಕ್ ಯುದ್ಧ ಮತ್ತು ಇತರ ವಿಷಯಗಳ ಬಗ್ಗೆ ವರದಿ ಮಾಡಿದ್ದರು. ಯೇಲ್ ವಿಶ್ವವಿದ್ಯಾನಿಲಯದ ಪದವೀಧರೆಯಾಗಿರುವ ಅವರು, ‘ವಾಲ್ ಸ್ಟ್ರೀಟ್ ಜರ್ನಲ್’ನ ಮಾಸ್ಕೊ ವರದಿಗಾರ್ತಿಯೂ ಆಗಿದ್ದರು. ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ಅವರು ನಿರ್ಮಿಸಿದ ಜಾಗೃತಿಯನ್ನು ಪರಿಗಣಿಸಿ ಅವರ ತಂಡಕ್ಕೆ ಪ್ರಶಸ್ತಿ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News