ಉಸಾಮ ಬಿನ್ ಲಾದನ್ ಹತ್ಯೆಯ 5ನೆ ವರ್ಷಾಚರಣೆ ಸಿಐಎಯಿಂದ ಸರಣಿ ಲೈವ್ ಟ್ವೀಟ್!
ವಾಶಿಂಗ್ಟನ್, ಮೇ 2: ಪಾಕಿಸ್ತಾನದ ಅಬೊಟಾಬಾದ್‌ನ ಕಟ್ಟಡವೊಂದರಲ್ಲಿ ಅಡಗಿದ್ದನೆನ್ನಲಾದ ಅಲ್-ಖಾಯ್ದ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಉಸಾಮ ಬಿನ್ ಲಾದನ್‌ನನ್ನು ಅಮೆರಿಕದ ವಿಶೇಷ ಪಡೆಗಳು ಹತ್ಯೆಗೈದ ಐದನೆ ವಾರ್ಷಿಕ ದಿನವನ್ನು ಸಿಐಎ ಸೋಮವಾರ ವಿಶಿಷ್ಟವಾಗಿ ಆಚರಿಸಿತು. ದಾಳಿ ಈಗ ತಾನೇ ನಡೆದಿದೆ ಎಂಬಂತೆ ಬಿಂಬಿಸುವ ಮಾಹಿತಿಯನ್ನೊಳಗೊಂಡ ಸಂದೇಶಗಳನ್ನು ಅದು ಸರಣಿ ಟ್ವೀಟ್‌ಗಳ ಮೂಲಕ ಬಿತ್ತರಿಸಿತು.
2011 ಮೇ ತಿಂಗಳಲ್ಲಿ ನಡೆದ ದಾಳಿಯ ವಿವರಗಳನ್ನು ------------#UBLRaid---------------------------- ಎಂಬ ಹ್ಯಾಶ್‌ಟ್ಯಾಗ್‌ನಲ್ಲಿ ಸಿಐಎ ‘ಲೈವ್ ಟ್ವೀಟ್’ ಮಾಡಿತು. ಅವೆುರಿಕದ ಗುಪ್ತಚರ ಸಂಸ್ಥೆ ಇಂಥ ಕ್ರಮಕ್ಕೆ ಮುಂದಾಗಿರುವುದು ಹಲವರ ಹುಬ್ಬೇರಿಸಿದೆ.
‘‘ಅಬೊಟಾಬಾದ್‌ನಲ್ಲಿ ನಡೆದ ಉಸಾಮ ಬಿನ್ ಲಾದನ್ ವಿರುದ್ಧದ ಕಾರ್ಯಾಚರಣೆ ಐದನೆ ವಾರ್ಷಿಕ ದಿನವನ್ನು, ಅದು ಇಂದೇ ನಡೆದಿದೆ ಎಂಬ ರೀತಿಯಲ್ಲಿ ನಾವು ಟ್ವೀಟ್ ಮಾಡುತ್ತೇವೆ. -----------#UBLRaid-----------'' ಎಂದು---- @CIA--- ತನ್ನ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿತು.
ಕಾರ್ಯಾಚರಣೆ ಸಾಗುತ್ತಿರುವಂತೆಯೇ ಶ್ವೇತಭವನದ ‘ಸಿಚುವೇಶನ್ ರೂಮ್’ನಲ್ಲಿ ಪರಿಸ್ಥಿತಿಯನ್ನು ಅಮೆರಿಕದ ಅಧ್ಯಕ್ಷ ಬರಾಕ್‌ಒಬಾಮ ಮತ್ತು ಇತರ ಉನ್ನತ ಅಧಿಕಾರಿಗಳು ವೀಕ್ಷಿಸುತ್ತಿರುವ ಚಿತ್ರಗಳನ್ನೂ ಟ್ವೀಟ್ ಮಾಡಲಾಯಿತು.