×
Ad

ರಾಜ್ಯಸಭೆಗೆ ಮಲ್ಯ ರಾಜೀನಾಮೆ

Update: 2016-05-02 22:04 IST

ಹೊಸದಿಲ್ಲಿ,ಮೇ 2: ವಿವಿಧ ಬ್ಯಾಂಕ್‌ಗಳಿಗೆ 9 ಸಾವಿರ ಕೋಟಿ ರೂ.ಗೂ ಅಧಿಕ ಸಾಲ ಮರುಪಾವತಿಸದೆ ವಿದೇಶಕ್ಕೆ ಪರಾರಿಯಾಗಿರುವ ವಿಜಯಮಲ್ಯ ಸೋಮವಾರ ತನ್ನ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ನಾಳೆ ಸಭೆ ಸೇರಲಿರುವ ಸಂಸದೀಯ ನೀತಿಶಾಸ್ತ್ರ ಸಮಿತಿಯು ರಾಜ್ಯಸಭೆಯಿಂದ ಮಲ್ಯ ಅವರನ್ನು ಉಚ್ಚಾಟಿಸುವಂತೆ ಶಿಫಾರಸು ಮಾಡುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ, ಮಲ್ಯ ಮುಂಚಿತವಾಗಿಯೇ ರಾಜೀನಾಮೆ ಸಲ್ಲಿಸಿದ್ದಾರೆ. ಪ್ಪು ಹಣವನ್ನು ಬಿಳುಪುಗೊಳಿಸಿದ ಆರೋಪವನ್ನು ಎದುರಿಸುತ್ತಿರುವ ಮಲ್ಯರನ್ನು ಬ್ರಿಟನ್‌ನಿಂದ ಗಡಿಪಾರು ಮಾಡಲು ವಿದೇಶಾಂಗ ಸಚಿವಾಲಯವು ಈಗಾಗಲೇ ಕಾನೂನು ಕ್ರಮಗಳನ್ನು ಆರಂಭಿಸಿದೆ.

ಈಗ ಸ್ಥಗಿತ ಗೊಂಡಿರುವ ಮಲ್ಯ ಒಡೆತನದ ಕಿಂಗ್‌ಫಿಶರ್ ಏರ್‌ಲೈನ್ಸ್‌ಗೆ 9 ಸಾವಿರ ಕೋಟಿ ರೂ. ಸಾಲವನ್ನು ವಸೂಲು ಮಾಡಲು ಕ್ರಮಗಳನ್ನು ಕೈಗೊಳ್ಳುವಂತೆ 17 ಬ್ಯಾಂಕ್‌ಗಳ ಒಕ್ಕೂಟವು ಸುಪ್ರೀಂಕೋರ್ಟ್‌ನ ಮೆಟ್ಟಲೇರಿದೆ.

  ಕೇಂದ್ರ ಸರಕಾರವು ಈಗಾಗಲೇ ಮಲ್ಯ ಅವರ ಪಾಸ್‌ಪೋರ್ಟನ್ನು ರದ್ದುಪಡಿಸಿದೆ ಹಾಗೂ ನಾಳೆ ನಡೆಯಲಿರುವ ಸಂಸದೀಯ ನೀತಿಶಾಸ್ತ್ರ ಸಮಿತಿಯ ಸಭೆಯು ಮಲ್ಯರನ್ನು ರಾಜ್ಯಸಭಾ ಸದಸ್ಯತ್ವದಿಂದ ಉಚ್ಚಾಟಿಸಲು ಶಿಫಾರಸು ಾಡುವ ಸಾಧ್ಯತೆಯಿದೆಯೆನ್ನಲಾಗಿದೆ.

 ಆದರೆ ವಿಚಾರಣೆಯನ್ನು ಎದುರಿಸಲು ಭಾರತಕ್ಕೆ ವಾಪಸಾಗ ದಿರುವ ತನ್ನ ನಿರ್ಧಾರವನ್ನು ಮಲ್ಯ ಸಮರ್ಥಿಸಿ ಕೊಂಡಿದ್ದಾರೆ. ತನ್ನ ಬಂಧನದಿಂದಾಗಲಿ ಅಥವಾ ಪಾಸ್‌ಪೋರ್ಟ್ ರದ್ದತಿಯಂತಹ ಕ್ರಮಗಳುಸಾಲವನ್ನು ತನಗೆ ಮರುಪಾವತಿಸಲು ನೆರವಾಗದೆಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News