×
Ad

ಭಾರತಕ್ಕೆ ಕೆನಡಾ ಕಂಪೆನಿಯಿಂದ ಕ್ಯಾನ್‌ನಲ್ಲಿ ಶುದ್ಧಗಾಳಿ; ಪ್ರತಿ ಉಸಿರಿಗೆ 12.50 ರೂಪಾಯಿ!

Update: 2016-05-02 23:50 IST

ಹೊಸದಿಲ್ಲಿ, ಮೇ 2: ಇದು ಗಾಳಿ ಮಾತು ಎಂದು ಸುಮ್ಮನಾಗಬೇಡಿ. ಉಸಿರಾಟದ ಶುದ್ಧ ಗಾಳಿಯ ಬೆಲೆ ನಿಮಗೆ ಗೊತ್ತೇ? ವಿಶ್ವ ಆರೋಗ್ಯ ಸಂಸ್ಥೆಯ ಸಮೀಕ್ಷೆ ಪ್ರಕಾರ ವಿಶ್ವದ ಅತ್ಯಂತ ವಾಯುಮಾಲಿನ್ಯದ ನಗರ ಎಂಬ ಕುಖ್ಯಾತಿಗೆ ಪಾತ್ರವಾದ ದಿಲ್ಲಿಯ ಜನರನ್ನು ಕೇಳಿ ನೋಡಿ. ಬಹುಶಃ ಅವರ ಪ್ರಕಾರ ಶುದ್ಧ ಗಾಳಿಗೆ ಬೆಲೆ ಕಟ್ಟಲಾಗದು. ಆದರೆ ಕೆನಡಾ ಕಂಪನಿಯೊಂದು ಒಂದು ಉಸಿರಾಟದ ಶುದ್ಧ ಗಾಳಿಯ ಬೆಲೆ 12.5 ರೂಪಾಯಿ ಎಂದು ಅಂದಾಜು ಮಾಡಿದೆ.

ಕೆನಡಾದ ಪಶ್ಚಿಮ ಪ್ರಾಂತ ಅಲ್ಬೆರ್ಟಾದ ವೈಟಾಲಿಟಿ ಏರ್ ಎಂಬ ಆರಂಭಿಕ ಕಂಪೆನಿಯೊಂದು ಕ್ಯಾನ್‌ಗಳಲ್ಲಿ ತುಂಬಿಸಿದ ಶುದ್ಧ ಗಾಳಿಯನ್ನು ಭಾರತದ ಗ್ರಾಹಕರಿಗೆ ಮಾರಾಟ ಮಾಡಲು ನಿರ್ಧರಿಸಿದೆ. ಚೀನಾ ಮಾರುಕಟ್ಟೆಗೆ 2015ರಲ್ಲಿ ಪ್ರವೇಶಿಸಿದಾಗ ಇದು ದೊಡ್ಡ ಸುದ್ದಿ ಮಾಡಿತ್ತು. ಬೀಜಿಂಗ್‌ನಲ್ಲಿ ಹೊಗೆಮಿಶ್ರಿತ ಮಂಜು ಅತ್ಯಧಿಕವಾಗಿದ್ದು, ಮಾಲಿನ್ಯ ಪ್ರಮಾಣ ದಿಲ್ಲಿಗೆ ಸಮನಾಗಿದೆ. ಕಳೆದ ಬೇಸಿಗೆಯಲ್ಲಿ ಇದನ್ನು ವಿನೂತನ ಪ್ರಯತ್ನವಾಗಿ ಆರಂಭಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News