×
Ad

18 ವರ್ಷದಿಂದ ಮಹಿಳೆ ಹೊಟ್ಟೆಯಲ್ಲಿದ್ದ ಕತ್ತರಿ ಹೊರತೆಗೆದ ವೈದ್ಯರು!

Update: 2016-05-02 23:53 IST

ಚೆನ್ನೈ, ಮೇ 2: ಟೂತ್‌ಬ್ರಶ್ ನುಂಗಿ ಒಂದು ವರ್ಷದ ಕಾಲ ಬಾಯಿ ಬಿಡದ ಬಾಲಕ ವೈದ್ಯಕೀಯ ವಿಸ್ಮಯ ಎನಿಸಿಕೊಂಡ ಬೆನ್ನಲ್ಲೇ, 18 ವರ್ಷಗಳಿಂದ 60ರ ವೃದ್ಧೆಯೊಬ್ಬರು ಹೊಟ್ಟೆಯಲ್ಲಿ ಕತ್ತರಿ ಇಟ್ಟುಕೊಂಡು ನರಕಯಾತನೆ ಅನುಭವಿಸಿದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

ತೀವ್ರ ಹೊಟ್ಟೆನೋವು ಎಂಬ ಕಾರಣದಿಂದ ಸರಕಾರಿ ಆಸ್ಪತ್ರೆಗೆ ಬಂದಿದ್ದ ಸರೋಜಾ ಎಂಬ ಮಹಿಳೆಯ ಹೊಟ್ಟೆಯಲ್ಲಿದ್ದ ಕತ್ತರಿಯನ್ನು ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದ ಘಟನೆ ನಡೆದಿದೆ. 1998ರಲ್ಲಿ ಅಪೆಂಡಿಕ್ಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮಹಿಳೆಯ ಹೊಟ್ಟೆಯಲ್ಲೇ ಕತ್ತರಿ ಬಿಟ್ಟಿರಬೇಕು ಎಂಬ ಅನುಮಾನವನ್ನು ವೈದ್ಯರು ವ್ಯಕ್ತಪಡಿಸಿದ್ದಾರೆ.
 ಹೊಟ್ಟೆಯಲ್ಲಿದ್ದ ಈ ಕತ್ತರಿಯ ಸುತ್ತಲೂ ಮಾಂಸ ಬೆಳೆದಿತ್ತು. ಇದನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಒಳಗೆ ಏನಿದೆ ಎನ್ನುವುದನ್ನು ತಿಳಿಯಲಾಯಿತು ಎಂದು ಚಿಕಿತ್ಸೆ ನೀಡಿದ ಸ್ಟಾನ್ಲಿ ಮೆಡಿಕಲ್ ಕಾಲೇಜಿನ ವೈದ್ಯ ಡಾ.ಇಸಾಕ್ ಮೊಸೆಸ್ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News