ನಮ್ಮ ಬದುಕಿನ ನೀತಿ ಸಂಹಿತೆಯೇ ಧರ್ಮ: ಒಡಿಯೂರು ಶ್ರೀ

Update: 2016-05-02 18:30 GMT

ಮಂಜೇಶ್ವರ, ಮೇ 2: ನಮ್ಮ ಬದುಕಿನ ನೀತಿ ಸಂಹಿತೆಯೇ ಧರ್ಮ. ಧರ್ಮ ಎಂದರೆ ಒಂದು ವ್ಯವಸ್ಥೆ; ಬದುಕಿನ ಸೂತ್ರ. ಸೂರ್ಯನಂತೆ ನಿಸ್ವಾರ್ಥ ಸೇವೆ ನಮ್ಮದಾಗಬೇಕು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದ್ದಾರೆ.

 ಬೆಳ್ಳೂರು ಶ್ರೀ ಮಹಾವಿಷ್ಣು ಕ್ಷೇತ್ರದ ನವೀಕರಣ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳ ಅಂಗವಾಗಿ ರವಿವಾರ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ಕರ್ನಾಟಕ ವಿದ್ಯುತ್ ನಿಗಮದ ಮಾಜಿ ನಿರ್ದೇಶಕ ಸಂಕಪ್ಪ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಡಾ.ಶ್ರೀನಿಧಿ ಸರಳಾಯ ಬದಿಯಡ್ಕ, ದಿನೇಶ್ ಕುಮಾರ್ ಜೈನ್ ಪುತ್ತೂರು, ಗೋಪಾಲ ಶೆಟ್ಟಿ ಅರಿಬೈಲು, ಮಾಧವ ಟ್ ಕೊಲ್ಯ ಉಪಸ್ಥಿತರಿದ್ದರು. ಸುಳ್ಯ ಸರ್ವೋದಯ ವಿದ್ಯಾ ಸಂಸ್ಥೆಯ ಸಂಚಾಲಕ ಮಾಧವ ಟ್ ಕೊಲ್ಯ, ಸಲಹಾ ಸಮಿತಿ ಸದಸ್ಯ ಕುಂಜತ್ತೋಡಿ ಗೋಪಾಲಕೃಷ್ಣ ಟ್, ಗಣೇಶ್ ಪ್ರಸಾದ್ ಪೆಲತ್ತಡಿ, ಬ್ರಹ್ಮಕಲಶೋತ್ಸವ ಜೊತೆಕಾರ್ಯದರ್ಶಿ ಎ.ಬಿ.ಲಕ್ಷ್ಮೀನಾರಾಯಣ ಬಲ್ಲಾಳ್, ದ್ವನಿ-ಬೆಳಕಿನ ಸಂಚಾಲಕ ಚಂದ್ರನಾಥ ರೈ ಕಾನಕ್ಕೋಡು, ಸ್ವಾಗತ ಸಮಿತಿ ಸದಸ್ಯ ಮಂಜುನಾಥ ರೈ ಮಿತ್ತಮಜಲು, ವೈದಿಕ ಸಮಿತಿ ಸದಸ್ಯ ಭಾಸ್ಕರ ಕಡಂಬಳಿತ್ತಾಯ, ಗ್ರಾಪಂ ಸದಸ್ಯೆ ಸುಜಾತಾ.ಎಂ.ರೈ, ಕೃಷ್ಣ.ಕೆ ಕಿನ್ನಿಂಗಾರು, ಉಪಸ್ಥಿತರಿದ್ದರು.

 ರವೀಂದ್ರ ಅಡ್ವಳ ಪ್ರಾರ್ಥಿಸಿದರು. ಸಲಹಾ ಸಮಿತಿ ಸದಸ್ಯ ನ್ಯಾ.ಚಂದ್ರಶೇಖರ.ಕೆ.ಎಸ್ ಸ್ವಾಗತಿಸಿ, ಬ್ರಹ್ಮಕಲಶೋತ್ಸವ ಜೊತೆಕಾರ್ಯದರ್ಶಿ ಪ್ರದೀಪ್ ಪುಳಿತ್ತಡಿ ವಂದಿಸಿದರು. ಚಂದ್ರಶೇಖರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

 ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಖಿಲಾ ಪಜಿಮಣ್ಣು ಪುತ್ತೂರು ಇವರಿಂದ ದಾಸವೈವ, ಚಿನ್ಮಯಿ.ವಿ.ಭಟ್ ಬೇಂದ್ರೋಡು ಇವರಿಂದ ಶಾಸ್ತ್ರೀಯ ಸಂಗೀತ, ತ್ರಿಶ್ಶೂರು ಶ್ರೀಹರಿ ಭಜನಾ ಸಂಘದವರಿಂದ ಭಜನಾಮೃತ, ಕಾಪೋಲಿ ನಾಟ್‌ಕೂಟಂ ಬೇಡಗಂ ಇವರಿಂದ ನಾಡಂ ಕಲಾಮೇಳ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News