ಉಸಾಮ ಅವಿತಿದ್ದ ವಿಷಯ ಪಾಕ್ ನಾಯಕರಿಗೆ ತಿಳಿದಿತ್ತು: ಹಿಲರಿ
Update: 2016-05-03 19:41 IST
ವಾಶಿಂಗ್ಟನ್, ಮೇ 3: ಉಸಾಮ ಬಿನ್ ಲಾದನ್ ಅಬೊಟಾಬಾದ್‌ನ ಕಟ್ಟಡವೊಂದರಲ್ಲಿ ಅವಿತುಕೊಂಡಿದ್ದ ವಿಷಯ ಪಾಕಿಸ್ತಾನ ಹಿರಿಯ ನಾಯಕರಿಗೆ ತಿಳಿದಿತ್ತು, ಆದರೆ, ಇದಕ್ಕೆ ಸಂಬಂಧಿಸಿ ಪುರಾವೆಯನ್ನು ಪಡೆಯಲು ಅಮೆರಿಕಕ್ಕೆ ಈವರೆಗೆ ಸಾಧ್ಯವಾಗಿಲ್ಲ ಎಂದು ಹಿಲರಿ ಕ್ಲಿಂಟನ್ ಹೇಳಿದ್ದಾರೆ. 2011 ಮೇ 2ರಂದು ಉಸಾಮ ಹತ್ಯೆಗೆ ಕಾರಣವಾದ ದಾಳಿ ನಡೆದ ಸಂದರ್ಭದಲ್ಲಿ ಹಿಲರಿ ಕ್ಲಿಂಟನ್ ಅಮೆರಿಕದ ವಿದೇಶಾಂಗ ಕಾರ್ಯದರ್ಶಿಯಾಗಿದ್ದರು ಹಾಗೂ ಈಗ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಆಕಾಂಕ್ಷಿಯಾಗಿದ್ದಾರೆ.