ಭೂಮಿಯಲ್ಲಿ ಲಕ್ಷ ಕೋಟಿ ಜೀವ ಪ್ರಬೇಧಗಳು ಆದರೆ ನಮಗೆ ಗೊತ್ತಿರುವುದು ಅಲ್ಪ

Update: 2016-05-03 15:14 GMT

ನ್ಯೂಯಾರ್ಕ್, ಮೇ 3: ಭೂಮಿಯಲ್ಲಿ ಸುಮಾರು ಒಂದು ಲಕ್ಷ ಕೋಟಿ ಪ್ರಬೇಧಗಳಿವೆ, ಆದರೆ, ಆ ಪೈಕಿ 99.999 ಶೇಕಡದಷ್ಟನ್ನು ಇನ್ನೂ ಸಂಶೋಧಿಸಲಾಗಿಲ ಎಂದು ಇಂಡಿಯಾನ ವಿಶ್ವವಿದ್ಯಾನಿಲಯದ ಜೀವಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸರಕಾರ, ಶೈಕ್ಷಣಿಕ ವಲಯ ಮತ್ತು ನಾಗರಿಕ ವಿಜ್ಞಾನ ಕ್ಷೇತ್ರಗಳ ಸೂಕ್ಷ್ಮಾಣುಜೀವಿ, ಸಸ್ಯ ಮತ್ತು ಪ್ರಾಣಿ ಸಮುದಾಯದ ಮಾಹಿತಿಕೋಶಗಳನ್ನು ವಿಶ್ಲೇಷಣೆ ನಡೆಸಿ ಈ ತೀರ್ಮಾನಕ್ಕೆ ಬಂದಿದ್ದಾರೆ.

ಅಂಟಾರ್ಕ್ಟಿಕವನ್ನು ಹೊರತುಪಡಿಸಿ ಜಗತ್ತಿನ ಎಲ್ಲ ಸಾಗರಗಳು ಮತ್ತು ಖಂಡಗಳ 35,000 ಸ್ಥಳಗಳಲ್ಲಿ ಲಭ್ಯವಿರುವ 56 ಲಕ್ಷ ಸೂಕ್ಷ್ಮಾಣುಜೀವಿ ಮತ್ತು ಸೂಕ್ಷ್ಮಾಣೇತರ ಜೀವ ಪ್ರಬೇಧಗಳು ಈ ಮಾಹಿತಿಕೋಶಗಳ ವಿಶ್ಲೇಷಣೆಯಲ್ಲಿ ಪತ್ತೆಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News